ನ್ಯಾಯನಿಷ್ಠುರಿ

Author : ಜಿ.ಪಿ. ಬಸವರಾಜು

Pages 112

₹ 140.00




Year of Publication: 2023
Published by: ಸಂಗಾತ ಪುಸ್ತಕ
Address: ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

'ನ್ಯಾಯನಿಷ್ಠುರಿ’ ಆತ್ಮೀಯರ ಕಣ್ಣಲ್ಲಿ ಜಿ.ಎಚ್. ನಾಯಕ ಅವರ ಕುರಿತು ರಚಿಸಿದ ಸಂಸ್ಮರಣ ಗ್ರಂಥವಾಗಿದೆ. ಈ ಕೃತಿಯನ್ನು ಬಸವರಾಜು ಜಿ.ಪಿ ಅವರು ಸಂಪಾದಿಸಿದ್ದಾರೆ. ವಿಮರ್ಶಕರಾಗಿದ್ದ ಜಿ.ಎಚ್.ನಾಯಕರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ನಾಯಕರ ಕುರಿತು ಅವರ ಒಡನಾಡಿಗಳು, ಆತ್ಮೀಯರು ಬರೆದಿರುವ ಬರಹಗಳನ್ನು ಹಿರಿಯರಾದ ಜಿ.ಪಿ.ಬಸವರಾಜು ಸಂಪಾದಿಸಿಕೊಟ್ಟಿದ್ದಾರೆ. ವ್ಯಕ್ತಿಯಾಗಿ ಮತ್ತು ವಿಮರ್ಶಕರಾಗಿ ನಾಯಕರನ್ನು ಹಲ ಬಗೆಯಲ್ಲಿ ಇಲ್ಲಿ ಗ್ರಹಿಸಲಾಗಿದೆ. ನಿರಂತರ ಅಧ್ಯಯನ, ಆಳವಾದ ಪಾಂಡಿತ್ಯ, ಸೂಕ್ಷ್ಮ ಸಂವೇದನೆ, ಖಚಿತ ಮತ್ತು ಸ್ಪಷ್ಟ ನಿಲುವು, ಅಪರೂಪದ ಒಳನೋಟಗಳು ನಾಯಕರ ವಿಮರ್ಶೆಗೆ ಘನತೆಯನ್ನು, ಗೌರವವನ್ನು ತಂದಿದ್ದವು. ನಾಯಕರ ಒಂದು ಮಾತಿಗಾಗಿ, ಅಭಿಪ್ರಾಯಕ್ಕಾಗಿ ಕಾತರಿಸುವ ಲೇಖಕರ, ಓದುಗರ ಸಮುದಾಯವೇ ಇತ್ತು ಎಂಬುದು ನಾಯಕರ ವಿಮರ್ಶೆಯ ಸ್ಥಾನವನ್ನು ಕೂಡ ಪರೋಕ್ಷವಾಗಿ ಸೂಚಿಸುತ್ತದೆ‌. 'ನ್ಯಾಯನಿಷ್ಠುರಿ' ಪುಸ್ತಕ ನಾಯಕರ ಕುರಿತಾಗಿ ಮತ್ತಷ್ಟು ಅಭಿಮಾನವನ್ನು ಹೆಚ್ಚಿಸುತ್ತದೆ; ಪ್ರಜ್ಞೆಯನ್ನು ವಿಸ್ತರಿಸುತ್ತದೆ.

About the Author

ಜಿ.ಪಿ. ಬಸವರಾಜು
(03 August 1952)

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...

READ MORE

Related Books