‘ಕಲ್ಯಾಣ ದರ್ಪಣ’ -ಈ ಕೃತಿಯು ಬಸವಕಲ್ಯಾಣ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ. ಡಾ. ಕಲ್ಯಾಣರಾವ ಜಿ. ಪಾಟೀಲ ಸಂಪಾದಕರು, ಎಚ್.ಡಿ. ಖಡ್ಕೆ ಹಾಗೂ ಧನರಾಜ ಫುಲಾರಿ ಸಹ ಸಂಪಾದಕರು. ಬಸವಕಲ್ಯಾಣದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಿಸರಕ್ಕೆ ಸಂಬಂಧಿಸಿದ 14 ಲೇಖನಗಳನ್ನು ಮತ್ತು 30ಕ್ಕಿಂತ ಹೆಚ್ಚು ಕವನಗಳನ್ನು ತರಿಸಿಕೊಂಡು ಪ್ರಕಟಿಸಲಾಗಿದೆ. ಯಾವುದೇ ಜಾಹೀರಾತು ಮತ್ತು ಗ್ರಂಥ ದಾನಿಗಳಿಲ್ಲದೇ, ಬಸವಕಲ್ಯಾಣ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಮಾಜಿಕ ಕಳಕಳಿಯ ಸ್ನೇಹಿತರು ಮತ್ತು ಸ್ಥಳೀಯ ಸಂವಹನದ ಸದಸ್ಯರ ಸಹಯೋಗದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ಮಾದರಿ ಸ್ಮರಣ ಸಂಚಿಕೆ ಸಿದ್ಧಪಡಿಸಿದ ಸಾಧನೆ ಅವರದ್ದಾಗಿದೆ.
ಈ ಹೊತ್ತಿಗೆಯಲ್ಲಿ ಕವಿಗಳು ಕಂಡ ಕಲ್ಯಾಣ, ಬಸವಕಲ್ಯಾಣ ಪ್ರದೇಶದ ಪ್ರಾಚೀನ ಧಾರ್ಮಿಕ ಸ್ಥಿತಿಗತಿಯ ಸ್ಥೂಲ ಚಿತ್ರಣ, ಬಸವಕಲ್ಯಾಣದ ಐತಿಹಾಸಿಕ ಮಹತ್ವ, ಕಲ್ಯಾಣ ನಾಡಿನ ಶಿಲ್ಪಕಲಾ ವೈಭವ, ಕಲ್ಯಾಣ ನಾಡಿನ ದತ್ತಿ ಶಾಸನಗಳು, ಕಲ್ಯಾಣ ನಾಡಿನ ಜನಪದ ಕಲೆಗಳು, ಗೋರ್ಟಾ(ಬಿ) ಒಂದು ಸಾಂಸ್ಕೃತಿಕ ಸಮೀಕ್ಷೆ, ಜಗತ್ಕಲ್ಯಾಣ, ಬಸವಣ್ಣನವರ ಮಾನವೀಯತೆ, ವಚನಗಳಲ್ಲಿ ಕಾವ್ಯ ಮೀಮಾಂಸೆ, ವಚನ ಚಳವಳಿಯಲ್ಲಿ ಮಹಿಳೆಯ ಧ್ವನಿ, ವಚನಕರ ಉರಿಲಿಂಗ ಪೆದ್ದಿ, ಆಯ್ದಕ್ಕಿ ಮಾರಯ್ಯ ಲಕ್ಕಮ್ಮಗಳ ಆದರ್ಶ ಬದುಕಿನ ಪ್ರಸ್ತುತತೆ, ದಿನಬಳಕೆಯಲ್ಲಿ ಕನ್ನಡ ಮುಂತಾದ ಮಹತ್ವದ ಸಾಂದರ್ಭಿಕ ಲೇಖನಗಳಿವೆ. ಸಮ್ಮೇಳನಾಧ್ಯಕ್ಷ ಡಾ. ಜಿ.ಬಿ. ವಿಸಾಜಿಯವರ ಪರಿಚಯ, ಕೊನೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಸರ್ವ ಸಮಿತಿಗಳ ಯಾದಿಯನ್ನು ಕೊಟ್ಟಿರುವುದು ವಿಶೇಷ..
©2024 Book Brahma Private Limited.