ಶಬ್ದ ಮತ್ತು ಜಗತ್ತು

Author : ಎಂ.ಎ. ಹೆಗಡೆ

Pages 200

₹ 120.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಬಿಮಲ್‌ಕೃಷ್ಣ ಮತಿಲಾಲ್ ಅವರು ಭಾರತದ ತತ್ತ್ವಶಾಸ್ತ್ರವನ್ನು ಕುರಿತು ಆಳವಾದ ಅಧ್ಯಯನ ನಡೆಸಿದ ಪಂಡಿತರು; ಅಂಥ ಅಧ್ಯಯನದ ಫಲಗಳನ್ನು ಪಾಶ್ಚಿಮಾತ್ಯ ತತ್ತ್ವಶಾಸ್ತ್ರದೊಂದಿಗೂ ಸಮೀಕರಿಸಿ, ತುಲನೆ ಮಾಡಿ ಹಲವಾರು ಮಹತ್ತ್ವದ ಗ್ರಂಥಗಳನ್ನು ಅವರು ರಚಿಸಿದ್ದಾರೆ. ಅಂಥ ಗ್ರಂಥಗಳಲ್ಲೊಂದು ಪ್ರಸ್ತುತ ಪುಸ್ತಕ.ಈ ಪುಸ್ತಕವು ಭಾರತದ ತತ್ತ್ವಶಾಸ್ತ್ರದಲ್ಲಿ ಭಾಷೆಯನ್ನು ಕುರಿತಂತೆ ನಡೆದ ಜಿಜ್ಞಾಸೆಗಳ ಒಂದು ವಿಮರ್ಶಾತ್ಮಕ ಸಮೀಕ್ಷೆಯನ್ನು ನಡೆಸುತ್ತದೆ. ಪುಸ್ತಕದ ಮೊದಲ ಭಾಗವು ಶಬ್ದ, ಅರ್ಥ, ನಾಮ, ವಸ್ತು, ಕಾರಕ ಮೊದಲಾದ ಕೆಲವು ಪ್ರಮುಖ ಪರಿಕಲ್ಪನೆಗಳ ಮೇಲೆ ಕೇಂದ್ರೀಕರಿಸುತ್ತದೆ; ಎರಡನೆಯ ಭಾಗದಲ್ಲಿ ಸ್ಫೋಟಸಿದ್ಧಾಂತವೇ ಮೊದಲಾದ ಭಾರತೀಯ ಭಾಷಾಶಾಸ್ತ್ರದ ಪ್ರಮುಖ ಧಾರೆಗಳನ್ನು ವಿಶ್ಲೇಷಿಸಲಾಗಿದೆ. ಜತೆಗೆ, ಪುಸ್ತಕದಾದ್ಯಂತ ಭಾರತದ ಭಾಷಾಚಿಂತನೆಗಳನ್ನು ಪಾಶ್ಚಿಮಾತ್ಯ ಸಿದ್ಧಾಂತಗಳೊಂದಿಗೆ ಹೋಲಿಸಿ ನೋಡುವ ಪ್ರಯೋಗವನ್ನೂ ಮಾಡಲಾಗಿದೆ.ಭಾಷೆ-ತತ್ತ್ವಶಾಸ್ತ್ರ-ಸಾಹಿತ್ಯದ ಆಸಕ್ತರೆಲ್ಲರಿಗೂ ಉಪಯುಕ್ತವಾಗಬಲ್ಲ ಆಕರಗ್ರಂಥ ಇದು.

About the Author

ಎಂ.ಎ. ಹೆಗಡೆ
(03 July 1948)

ಇವರು  ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು. ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್   ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ...

READ MORE

Related Books