ಅರಬಿ ಎಂಬ ಕಡಲು

Author : ಕನಕ ಹಾ. ಮ.

Pages 80

₹ 50.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನಕ ಹಾ.ಮ. ಅವರ ೫೦ ಕವನಗಳ ಸಂಕಲನ ಇದು. ಈ ಸಂಕಲನದ ಒಂದು ಪದ್ಯ ಹೀಗಿದೆ: ಕವಿತೆ ಸದ್ದಿಲ್ಲದೇ ಬರುವ ಕಾಮಿ ಬೆಕ್ಕು ಕದ್ದು ಕುಡಿಯುವುದು ಹಾಲು ಈಗ ಹೊಸಿಲ ಬಿಳೀ ಬಿಸಿಲ ಕೋಲಿನ ಮೇಲೆ ಕುಳಿತು ಮೂತಿ ಉದ್ದಿ ಉದ್ದಿ ಒಯ್ಯಾರ ಕಣ್ಣ ತುದಿಯ ಜೊಂಪು, ಕೊನರುವ ಆಲಸ್ಯ ಹಿಡಿಯಹೊರಟರೆ ಕೆಲವೊಮ್ಮೆ ಬಾಲದ ತುದಿ, ಕಿವಿ ಮಾತ್ರ ಕೈಗೆ ಸಿಕ್ಕಿ ನುಣುಚಿ ಜಾರುವ ಬಿನ್ನಾಣಗಿತ್ತಿ ಇಂದು ಹಿಡಿಯಲೇಬೇಕು ಇಡಿಯಾಗಿ ಹಿಡಿದು ತೊಡೆಯ ಮೇಲೇರಿಸಿ ನುಣುಪು ಮೈಯ ಸವರುತ್ತಾ ತಟ್ಟಿ ಮಲಗಿಸಬೇಕು

About the Author

ಕನಕ ಹಾ. ಮ.

ಹ.ಮಾ. ಕನಕ ಕನ್ನಡದ ಲೇಖಕಿ, ಮತ್ತು ಅಂಕಣಕಾರ್ತಿ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಇವರು ಕೆಲ ಕಾಲ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ, ಸಂಸ್ಥೆಗಳಲ್ಲೂ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಕನಕಾ ಅವರು ಅನುವಾದಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೊಳೆಬಾಗಿಲು, ಪಾಪನಾಶಿನಿ, ಅರಬಿ ಎಂಬ ಕಡಲು, ಬತ್ತಲಿಕೆ ಅವರ ಪ್ರಕಟಿತ ಕೃತಿಗಳು ...

READ MORE

Related Books