ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳು

Author : ಎ.ಕೆ.ರಾಮೇಶ್ವರ

Pages 132

₹ 70.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560011
Phone: 080-22107713

Synopsys

ಆಧ್ಯಾತ್ಮ ಸಾಧನೆ, ಸಮಾಜ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜಿ.ಎಂ. ಗುರುಸಿದ್ದೆಶಾಸ್ತ್ರಿಗಳ ಬದುಕು ಬರಹದ ಸಂಪೂರ್ಣ ಪರಿಚಯ ಈ ಕೃತಿಯಲ್ಲಿದೆ. ಕನ್ನಡ ಶಿಕ್ಷಕರಾಗಿದ್ದ ಗುರುಸಿದ್ದೆಶಾಸ್ತ್ರಿಗಳು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಶಂಕರಾನಂದ ಮುದ್ರಣಾಲಯ ಮುನ್ನಡೆಸಿದ್ದರು. ಇವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಪುಸ್ತಕವನ್ನು ತಪ್ಪದೇ ಓದಿ

About the Author

ಎ.ಕೆ.ರಾಮೇಶ್ವರ
(02 May 1934)

ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ  ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.  ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು.  ...

READ MORE

Related Books