ಅಂದಿನ ರಾಮನ ಮುಂದಿನ ಕಥೆ

Author : ಕೆ.ವಿ. ಅಕ್ಷರ

Pages 108

₹ 100.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಭವಭೂತಿಯು ಈ ನಾಟಕವನ್ನು ವಾಸ್ತವವಾದಿ ಪಾತಳಿಯಲ್ಲಿಯೇ ಕಟ್ಟಿದ್ದಾನೆ. ಕವಿಗೆ ರಾಮನು ದೇವನೇ ಹೌದು. ಹಾಗಿದ್ದೂ, ರಾಮನನ್ನು ತಪ್ಪು ಮಾಡುವ ಸಾಮರ್ಥ್ಯವುಳ್ಳ ಮನುಷ್ಯನನ್ನಾಗಿ ತೋರಿಸಲು ಆತ ಹೆದರುವುದಿಲ್ಲ. ರಾಮ ಸೀತೆಯರ ಕಥೆಗೆ ಮನುಷ್ಯ ಜಗತ್ತಿನ ಅನುಭವಗಳನ್ನೂ, ಭಾವನೆಗಳನ್ನೂ ಈ ನಾಟಕವು ಬೆಸೆಯುವ ಮೂಲಕವೇ ಪ್ರೇಕ್ಷಕರ ಅನುಭವಕ್ಕೆ ಪ್ರಮಾಣಬದ್ಧತೆಯನ್ನೂ ಸ್ಫುಟತೆಯನ್ನೂ ತಂದುಕೊಡುತ್ತದೆ. ರಾಮನನ್ನು ದೇವರೆಂದು ಭಾವಿಸಿ, ಅವನ ಕಥೆಯನ್ನು ಪುರಾಣವೆಂಬಂತೆ ನೋಡುವುದರಲ್ಲಿ ಭವಭೂತಿ ಆಸಕ್ತಿಯನ್ನು ತೋರಿಸುವುದಿಲ್ಲ. ಬದಲು ಆತ ಈ ನಾಟಕವನ್ನು ರಾಮ ಸೀತೆಯರೆನ್ನುವ ಮನುಷ್ಯರ ಕಥೆಯಾಗಿ ಕಟ್ಟಿ ಪ್ರೇಕ್ಷಕರಿಗೆ ವೈಯಕ್ತಿಕವಾಗಿ ತಟ್ಟುವಂತೆ ಮಾಡಿದ್ದಾನೆ. ರಾಮ ಸೀತೆಯರ ಕಥೆಯು ಹಲವು ಪದರಗಳನ್ನು ಹೊಂದಿದ ವಾಸ್ತವದಲ್ಲಿ ಬಿಚ್ಚಿಕೊಳ್ಳುತ್ತದೆ. ದಂಪತಿಗಳ ನಡುವಿನ ಪ್ರೀತಿಯೆಂಬುದು ಪರಸ್ಪರರನ್ನು ಒಳಗೊಳ್ಳುವ ಉತ್ಕಟವಾದ ಅನುಭವವಾಗಿ, 'ಸುಖ ದುಃಖವೆಂಬೆರಡು ಎರಡಲ್ಲವೆಂಬರಿವು' ಹುಟ್ಟಲಿಕ್ಕೆ ಭವಭೂತಿಯ ಬಹುವಾಸ್ತವದ ರಚನೆ ಕವಿಯ ಚಮತ್ಕಾರ ಮಾತ್ರವಾಗಿ ಉಳಿಯದೇ ನಾಟಕದ ಅನಿವಾರ್ಯ ವಿನ್ಯಾಸವಾಗುತ್ತದೆ. ಡಾ. ಜಿ.ಕೆ. ಭಟ್ ಅವರು ಸಂಪಾದಿಸಿರುವ ಈ ನಾಟಕದ ಮುನ್ನುಡಿಯಿಂದ

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books