ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕಾವ್ಯ ಕ್ರೋಧದ ನೆಲೆಯಲ್ಲಿ ಮಾತ್ರ ನಿಲ್ಲದೆ ನಮ್ಮ ಅರಿವನ್ನು ಹಿಗ್ಗಿಸುವ ದುಃಖದ ಸಂವೇದನೆಯಾಗುತ್ತದೆ. ಮೊದಲ ಓದಿಗೇ ಅರ್ಥವಾಗುವ ಇವರ ಸರಳತೆ ಮತ್ತೊಂದು ಓದಿನಲ್ಲಿ ಗಾಢವಾದ ಅನುಭವವನ್ನು ಕೊಡುತ್ತದೆ. ಇವರು ಕನ್ನಡ ಭಾಷೆಯನ್ನು ಅದರ ಎಲ್ಲಾ ಸಂಪತ್ತಿನಲ್ಲೂ ಬಳಸಬಲ್ಲರು. ಬೌದ್ಧ ಧರ್ಮ ತನ್ನೆಲ್ಲ ಅರ್ಥಗಳನ್ನು ಸದ್ಯದ ಸಂಕಷ್ಟದಲ್ಲಿ ಬಿಚ್ಚಿಡುವಂತೆ ಬರೆಯುವ ಚಿನ್ನಸ್ವಾಮಿ ನಮ್ಮ ಮಖ್ಯ ಕವಿಗಳಲ್ಲಿ ಒಬ್ಬರು. ಈ ಸಂಕಲನ ದಲಿತಸ್ಥಿತಿಗೆ ಮಿಡಿಯುತ್ತಲೇ ಮಾನವ ಅಂತಃಕರಣವನ್ನು ಹಿಗ್ಗಿಸಿ ಅಸ್ಪೃಶ್ಯತೆಯ ಚಾರಿತ್ರಿಕ ಅವಮಾನದಿಂದ ನಮ್ಮನ್ನು ಬಿಡುಗಡೆ ಮಾಡುವಂತಹ ಅರಿವು ಮೂಡಿಸುತ್ತದೆ.
©2025 Book Brahma Private Limited.