ಎನ್. ಮನು ಚಕ್ರವರ್ತಿ
ಶಿಕ್ಷಕರಾಗಿ, ಸಾಹಿತ್ಯ ಸಂಸ್ಕೃತಿ ಮತ್ತು ಸಿನಿಮಾ ವಿಮರ್ಶಕರಾಗಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖರು ಎನ್. ಮನು ಚಕ್ರವರ್ತಿ. ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಎನ್. ಮನು ಚಕ್ರವರ್ತಿ ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಗಣ್ಯ ವಿಮರ್ಶಕರು ಹೌದು. ಅನೇಕ ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ನಡೆಸಿದ್ದು ಪ್ರಬಂಧಗಳನ್ನು ಮಂಡಿಸಿ, ಸಂವಾದ ನಡೆಸಿದ್ದಾರೆ. 'ಕಲ್ಯರಿಂಗ್ ರಿಯಲಿಸಂ', 'ಪ್ರೇಮಿಂಗ್ ದಿ ನೂ ವೇವ್ (ಕನ್ನಡದ ಶ್ರೇಷ್ಠ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಕುರಿತ ಪುಸ್ತಕ)', 'ಭಾರತೀಯ ಸ್ತ್ರೀವಾದ' ಅವರ ಪ್ರಕಟಣೆ ಕಂಡ ಕೃತಿಗಳು. ಸಮಾಜ-ಸಂಸ್ಕತಿ-ಸಾಹಿತ್ಯ-ಕಲೆಗಳನ್ನು ಕುರಿತು ಅವರು ಬರೆದ ಚಿಂತನಾ ಬರೆಹಗಳು ‘ಮಾಧ್ಯಮ-ಮಾರ್ಗ’. ಕನ್ನಡದ ಪ್ರಮುಖ ಕೃತಿಗಳಲ್ಲಿ ...
READ MORE