ಮುಗಿಯದ ಮಧ್ಯಾಹ್ನ

Author : ಕಮಲಾಕರ ಕಡವೆ

Pages 88

₹ 65.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕಮಲಾಕರ ಕಡವೆಯವರು ಈ ಕವನ ಸಂಕುಲದಲ್ಲಿ ಶಬ್ದಗಳು ಇಡಿಕಿರಿದು ತುಂಬಿದ್ದರೂ ಪ್ರತಿ ಎರಡು ಶಬ್ದಗಳ ನಡುವೆ ಹಲವು ಮೌನಗಳು ತಲೆಮರೆಸಿಕೊಂಡು ಕೂತಿವೆ- ದಿಟ್ಟಿಯಿಡುವಷ್ಟು ದೂರ ತುಂಡರಿಸದೆ ಹರಡಿರುವ ದಟ್ಟ ಕಾನನದ ನಡುವೆಯೂ ಹರಿವ ಹಾರುವ ಎರಗಿ ಎಗರುವ ಬಗೆಬಗೆಯ ಪ್ರಾಣಿಗಳ ಆವಾಸಕ್ಕೆ ತೆರಪಿರುವ ಹಾಗೆ... ಕಾವ್ಯವೆಂದರೆ ಅಕ್ಕಪಕ್ಕದ ಶಬ್ದಗಳ ಸಹಬಾಳ್ವೆಯೆಂದು ನಂಬಿ ಈ ಕಾನನವ ಹೊಕ್ಕರೆ ನಮಗಲ್ಲಿ ಅಚ್ಚರಿಯ ಮೊತ್ತಗಳು ಧುತ್ತನೆ ಎದುರಾಗುತ್ತವೆ- ಪದಪದಕ್ಕೂ ಇಲ್ಲಿ ಹಲವೊಮ್ಮೆ ಹೊಯ್ದಕ್ಕಿ ಬೇಯವುದಿಲ್ಲ, ಪ್ರತಿಮೆಪ್ರತಿಮೆಗಳು ಕೈಕೈ ಹಿಡಿದು ಗಂಡಹೆಂಡಿರ ಹಾಗೆ ನಡೆಯುವುದಿಲ್ಲ, ಬದಲು, ಹಗ್ಗಜಗ್ಗಾಟದ ಸ್ಪರ್ಧಾಳುಗಳ ಹಾಗೆ ಆಚೀಚೆ ಜಗ್ಗುತ್ತವೆ... ಇಷ್ಟೂ ಸಾಲದೆಂಬಂತೆ, ಕನ್ನಡಕ್ಕೆ ಇಲ್ಲಿ ಹಿಂದಿ ಮರಾಠಿ ಇಂಗರೇಜಿಗಳ ಕಲಬೆರಕೆ... ಅಂಥ ಬೆರಕೆ ಕಲಾಗಾರಿಕೆಯಲ್ಲಿ ಸೃಷ್ಟಿಯಾಗಿವೆಯಿಲ್ಲಿ ಹಲಬಗೆಯ ಲೋಕಗಳು; ಅಥವಾ ಲೋಕದ ಗ್ರಹಿಕೆಗಳು; ಅಥವಾ ಅಂಥ ತುಣುಕುಗಳು- ಕೆಲವೊಮ್ಮೆ ಅವು ಬಹಿರಿಂದ್ರಿಯಗಳಿಗೆ ಸಿಕ್ಕುವ ದೃಶ್ಯಶ್ರವ್ಯ ಮಾಹಿತಿಗಳು; ಕೆಲವೊಮ್ಮೆ ಅವು ಕೇವಲ ಮನಸ್ಸಿನಾಳದ ಮುರುಕು ಆಟಿಕೆಯ ತುಂಡುಗಳು. ಕೆಲವೋ, ಅವು ಕವಿಯ ಭಾವದಲ್ಲಿ ಕೂಡಿ ಪದ್ಯಕ್ಕೆ ಬಂದಮೇಲೆ ತುಂಡಾಗಿ ಬಿದ್ದಂಥವು; ಇನ್ನು ಕೆಲವೋ, ಅವು ಓದುಗರ ಮನದಲ್ಲಿ ಮುಂದೊಮ್ಮೆ ಕೂಡಿದರೂ ಕೂಡಿಯಾವೆಂದು ಸದ್ಯಕ್ಕೆ ಹಾಗೆಯೇ ಬಿಟ್ಟಂಥವು... ಕಾವ್ಯವೆಂಬುದು ಪ್ರಾಯಶಃ ಈ ಕವಿಗೆ ಖಿಚಡಿಯ ಹಾಗೆ- ಅದು ಭಾವದ ಖಿಚಡಿಯೂ ಹೌದು, ಬುದ್ಧಿಯ ಖಿಚಡಿಯೂ ಹೌದು, ಅಥವಾ ಅವೆರಡೂ ಕೂಡಿದ ಬದುಕಿನ ಖಿಚಡಿಯೂ ಆದೀತು... -ಅಕ್ಷರ ಕೆ. ವಿ

About the Author

ಕಮಲಾಕರ ಕಡವೆ

ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರಾದ  ಕಮಲಾಕರ ಕಡವೆ, ಅವರು ಸದ್ಯ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರೆಯುವ ಅವರು ಅನುವಾದದಲ್ಲಿಯೂ ಆಸಕ್ತರಾಗಿದ್ದಾರೆ. ಮೂರು ಕವನ ಸಂಕಲನ ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ) ಮತ್ತು ಮುಗಿಯದ ಮಧ್ಯಾಹ್ನ (ಅಕ್ಷರ, 2010), ಜಗದ ಜತೆ ಮಾತುಕತೆ (ಅಕ್ಷರ, 2017). ...

READ MORE

Related Books