ಆಧುನಿಕ ಯುಗದಲ್ಲಿ ವ್ಯಕ್ತಿತ್ವ ವಿಕಸನವೆಂಬುದು ಅತ್ಯಂತ ಸೂಕ್ಷ್ಮವಾಗಿ ಗುರುತಿಸಲಾಗುವಂತಹ ಒಂದು ವಿಷಯ. ಏಕೆಂದರೆ ಯಾವುದೇ ಸಂಸ್ಥೆ ಇರಲಿ ತಮ್ಮಲ್ಲಿ ಪ್ರಬುದ್ಧ ವ್ಯಕ್ತಿತ್ವ ಹೊಂದಿರುವಂತಹ ವ್ಯಕ್ತಿಯನ್ನು ಸಂಸ್ಥೆಯಲ್ಲಿ ಸೇರಿಸಿಕೊಳ್ಳಲು ಆಶಿಸುತ್ತದೆ. ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಇಂತಹ ಹಲವು ಅಂಶಗಳು ಓರ್ವ ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತವೆ. ತಮ್ಮ ವ್ಯಕ್ತಿತ್ವ ವಿಕಸನಗೊಳಿಸಲು ಇತ್ತೀಚಿಗೆ ಹಲವು ಪುಸ್ತಕಗಳು ಲಭ್ಯವಿವೆ.
ಲೇಖಕರಾದ ಕೇಶವ್ ಅವರು ತಮ್ಮ ಅಗಾಧವಾದ ಓದಿನ ಹಿನ್ನೆಲೆಯನ್ನು ಹಾಗೂ ತಮ್ಮ ಜೀವನದ ನಿದರ್ಶನಗಳನ್ನು ಬಳಸಿಕೊಂಡು ಯುವ ಜನತೆಗೆ ಸುಖ ಜೀವನ ನಡೆಸುವ ಸೂತ್ರಗಳನ್ನು ನೀಡಿದ್ದಾರೆ. ಎಷ್ಟೇ ರೋಚಕವಾಗಿದ್ದರೂ ಕೂಡ ಒಂದು ಸಂಪೂರ್ಣ ಪುಸ್ತಕವನ್ನು ಓದುವ ವ್ಯವಧಾನ ಈಗಿನ ಯುವಕರಿಗೆ ಇಲ್ಲವೆಂಬುದನ್ನು ಅರಿತ ಕೇಶವ್ ಅವರು ತಮ್ಮ ವಾಕ್ಯ ರಚನೆಯ ಶೈಲಿಯಲ್ಲಿ ಮಹತ್ತರ ಬದಲಾವಣೇಯನ್ನು ತಂದು ಈ ಪುಸ್ತಕವನ್ನು ಬರೆದಿದ್ದಾರೆ. ಒಂದು ಪ್ಯಾರ ಓದಿದರೆ ಮುಂದಿನ ಪ್ಯಾರಾವನ್ನು ಓದಿಸಿಕೊಂಡು ಹೋಗುವಂತಹ ಅಪರೂಪದ ಶೈಲಿಯ ಬರೆವಣೆಗೆ ಈ ಪುಸ್ತಕದಲ್ಲಿ ಕಾಣಬಹುದು.
©2025 Book Brahma Private Limited.