ಸಿರಿಗನ್ನಡ ಗ್ರಂಥಕರ್ತರ ಚರಿತ್ರ ಕೋಶ ಎಂಬ ಈ ಕೃತಿಯು ಮೂಡಿ ಬರಲು ಕಾರಣವಾಗಿದ್ದೇ ಕನ್ನಡ ಹಿರಿಯ ಸಾಹಿತಿ ನರಸಿಂಹಚಾರ್ಯರು. ಅವರ ಕವಿಚರಿಯ ಪ್ರಭಾವದಿಂದ , ನಂತರ ಹೊಸ ಕನ್ನಡ ಸಾಹಿತ್ಯದಲ್ಲಿ ಆರಂಭದಿಂದ ಹಿಡಿದು ಕನ್ನಡದ ಯಾವುದೇ ಪ್ರಕಾರಗಳಲ್ಲಿ ಗ್ರಂಥಗಳನ್ನು ರಚಿಸಿದ ಗ್ರಂಥಕರ್ತರನ್ನು ಒಳಗೊಂಡಿರುವ ಒಂದು ದೊಡ್ಡನಿಘಂಟುಕೋಶ ಎಂದೂ ಕೂಡ “ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶವನ್ನು ಕರೆಯಬಹುದು. ಒಟ್ಟು ಈ ಕೃತಿಯಲ್ಲಿ ಗ್ರಂಥವನ್ನು ರಚಿಸಿದ ಗ್ರಂಥ ಕರ್ತರ, ಬಯೋಡಟಾ, ಗ್ರಂಥಕರ್ತರ ಸಂಪೂರ್ಣ ಹೆಸರು, ಇವರು ರಚಿಸಿದ ಗ್ರಂಥಗಳ ಬಗ್ಗೆ, ಆ ಗ್ರಂಥವು ಯಾವ ಪ್ರಕಾರದಲ್ಲಿದೆ, ಗ್ರಂಥಕರ್ತರ ಜನನದ ಬಗ್ಗೆ ಹಾಗೂ ಅವರ ಮರಣದ ಬಗ್ಗೆ ಇರುವ ಸಂಕ್ಷಿಪ್ತ ಪರಿಚಯ ಇವೆಲ್ಲವು ಈ ಕೃತಿಯಲ್ಲಿ ಒಳಗೊಂಡಿದೆ.
©2024 Book Brahma Private Limited.