ಆಧುನಿಕ ಕನ್ನಡ ವಿಮರ್ಶೆಯಲ್ಲಿ, ಕಾದಂಬರಿಗಳನ್ನು ಕುರಿತ ಚರ್ಚೆಯಲ್ಲಿ ’ಪ್ರಜ್ಞಾಪ್ರವಾಹ’ ಎಂಬ ನುಡಿಗಟ್ಟು ಸ್ಟ್ರೀಮ್ ಆಫ್ ಕಾನ್ ಷಸ್ ನೆಸ್’ (Stream of Consciousness) ಎಂಬ ಮಾತಿಗೆ ಸಮಾನಾರ್ಥಕವಾಗಿ ಬಳಸಲಾಗುತ್ತಿದೆ.
ವಿಮರ್ಶೆಯ ಪಾರಿಭಾಷಿಕವಾಗಿ ಪ್ರಜ್ಞಾಪ್ರವಾಹದ ಪರಿಕಲ್ಪನೆಯ ಬಗ್ಗೆ ಅನೇಕ ಚರ್ಚೆಗಳನ್ನು ಈ ಕೃತಿ ಒಳಗೊಂಡಿದೆ. ಪ್ರಜ್ಞಾಪ್ರವಾಹವು ಕೇವಲ ತಂತ್ರವೇ ? ಕಥನದ ಹೊಸ ವಿಧಾನವೇ ? ಮನುಷ್ಯನ ಅನುಭವಗಳನ್ನು ಹಿಡಿದಿಡಲು ಬಳಸಿಕೊಂಡ ಹೊಸ ರೂಪವೇ ? ಆಧುನಿಕ ಪಾಶ್ಚಾತ್ಯ ಕಾದಂಬರಿ ತನ್ನ ಮೂಲ ಸಾಮಗ್ರಿಯಾಗಿ ಕಂಡುಕೊಂಡ ಹೊಸ ವಸ್ತುವೇ ? ಅಥವಾ ಪ್ರಜ್ಞಾ ಪ್ರವಾಹವೆಂಬುದು ಸಾಹಿತ್ಯ ಪ್ರಕಾರವೇ ? ಇದಕ್ಕಿರುವ ಮೂಲ ಪ್ರೇರಣೆಗಳಾವುವು ? ಎನ್ನುವ ಹಲವಾರು ಪ್ರಶ್ನೆಗಳಿಗೆ ವಿಮರ್ಶಕರು ನೀಡಿದ ನಿರೂಪಣೆಗಳನ್ನು ಈ ಕೃತಿಯಲ್ಲಿ ಕಾಣಬಹುದು.
ಪ್ರಜ್ಞಾಪ್ರವಾಹ ವಿಮರ್ಶೆಯ ಪರಿಕಲ್ಪನೆಯಾದ ಬಗೆ, ಹಿನ್ನೆಲೆ ತಂತ್ರಗಳನ್ನು, ಕಾದಂಬರಿಯ ತಾತ್ವಿಕ ಹಿನ್ನೆಲೆಯನ್ನು, ಲಕ್ಷಣಗಳನ್ನೂ, ತಂತ್ರಗಳನ್ನೂ, ಪ್ರಜ್ಞಾಪ್ರವಾಹದ ಹಿನ್ನಲೆಯಲ್ಲಿ ರಚಿತವಾದ ಕಾದಂಬರಿಗಳ ಪರಿಚಯ, ಕಾದಂಬರಿಕಾರರ ವಿವರಗಳನ್ನು ವಿವರಣಾತ್ಮಕವಾಗಿ ಈ ಕೃತಿ ಚರ್ಚಿಸುತ್ತದೆ.
ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ ’ಪ್ರಜ್ಞಾಪ್ರವಾಹ’ ಕೃತಿಯನ್ನು ’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಪುಸ್ತಕ ಸರಣಿಯಲ್ಲಿ ಸಾಹಿತಿ ಡಾ, ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ.
©2024 Book Brahma Private Limited.