‘ಜಗತ್ತಿನ ಭೀಕರ ಯುದ್ಧಗಳು’ ಕೃತಿಯು ಎಂ. ವೆಂಕಟಸ್ವಾಮಿ ಅವರ ಇತಿಹಾಸ ಗ್ರಂಥವಾಗಿದೆ. ಇಲ್ಲಿ ಬಡವರು ಹಾಗೂ ಕಾರ್ಮಿಕ ಕುರಿತ ಕಥನಗಳಿವೆ. ಜಗತ್ತನ್ನು ಬಡವರು ಮತ್ತು ಕೂಲಿ ಕಾರ್ಮಿಕರು ಹೇಗೆ ಕಟ್ಟಿದರು ಮತ್ತು ಕಟ್ಟುತ್ತಿದ್ದಾರೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ. ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು. ಪಿರಮಿಡ್ ಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು, ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು, ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮು೦ದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನೀಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ ಎಂಬುವುದನ್ನು ತಿಳಿಸಿದ್ದಾರೆ.
©2024 Book Brahma Private Limited.