ಸೇಡಿನ ಹಕ್ಕಿ

Author : ಟಿ.ಕೆ. ರಾಮರಾವ್

Pages 221

₹ 195.00




Year of Publication: 2021
Published by: ಧೃತಿ ಪ್ರಕಾಶನ
Address: ಬೆಂಗಳೂರು

Synopsys

ಖ್ಯಾತ ಕಾದಂಬರಿಕಾರ ಟಿ.ಕೆ. ರಾಮರಾವ್ ಅವರ ಕಾದಂಬರಿ-ಸೇಡಿನ ಹಕ್ಕಿ. ಈ ಪತ್ತೆದಾರಿ  ಕಾದಂಬರಿಯು 1980 ಹಾಗೂ 2010 ಹೀಗೆ ಎರಡು ಆವೃತ್ತಿಗಳಲ್ಲಿ ಮುದ್ರಣಗೊಂಡಿತ್ತು. ಹೆಚ್ಚು ಪಾತ್ರಗಳಿಲ್ಲದ ಕಾದಂಬರಿಯು ವಸ್ತುವಿನಲ್ಲಷ್ಟೇ ಕೇಂದ್ರೀಕೃತಗೊಂಡಿದೆ. ಸೇಡಿನ ಬೆನ್ನು ಹತ್ತುವುದು ವ್ಯರ್ಥ ಶ್ರಮ ಎಂಬುದು ಈ ಕಾದಂಬರಿಯ ತಿರುಳು. ಎಲ್ಲಕ್ಕಿಂತ ಮಾನವೀಯತೆ ಹೆಚ್ಚು ಎಂಬ ಸಂದೇಶ ನೀಡುತ್ತದೆ. ಚೈತಾಲಿ ಎಂಬ ಮಹಿಳೆ ಈ ಕಾದಂಬರಿಯ ನಾಯಕಿ. ಓದುಗರ ಕುತೂಹಲ ಕೆರಳಿಸುವ ಕಾದಂಬರಿಯು ಸಾಮಾಜಿಕ ವಿದ್ಯಮಾನಗಳಿಂದಲೇ ಅಧ್ಯಾತ್ಮಿಕ ಕೆಲವು ಹೊಳವುಗಳನ್ನು-ತತ್ವ-ಸಿದ್ಧಾಂತಗಳನ್ನು ಸ್ಮರಿಸಿಕೊಳ್ಳುವಂತೆ ಮಾಡುತ್ತದೆ. 

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books