ಕನ್ನಡ ವ್ಯಾಕರಣ ಕುರಿತ ಮಹತ್ವದ ಗ್ರಂಥ ಎಂದು ಪರಿಗಣಿತವಾಗಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಹಿರಿಯ ವಿದ್ವಾಂಸ ಡಿ.ಎಲ್. ನರಸಿಂಹಾಚಾರ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.
'ಶಬ್ದಮಣಿದರ್ಪಣಂ' ಕಾವ್ಯವೂ ಹೌದು, ಶಾಸ್ತ್ರವೂ ಹೌದು; ಕಾವ್ಯಲೇಪನವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೆ... ಕೇಶಿರಾಜನ ಮನಃಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ ಎನ್ನುತ್ತಾರೆ ಡಿ.ಎಲ್. ಎನ್. ವಿಸ್ತೃತವಾದ ಪ್ರಸ್ತಾವನೆಯಲ್ಲಿ ಅವರು ”ಪ್ರಸಿದ್ಧ ಕವಿಗಳೂ ಪಂಡಿತರೂ ಆಗಿದ್ದವರ ಮನೆತನದಲ್ಲಿ ಹುಟ್ಟಿದ ಕೇಶಿರಾಜ. ಇವರ ನಡುವೆ ಬೆಳೆದು ಕಲಿತು ಕೇಶಿರಾಜನು ಕವಿಯೂ ಪಂಡಿತನೂ ಆದನು....ಅವನ ಸಹೃದಯತೆಯೂ ಅಭಿರುಚಿಯೂ ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ ಮೈಗೊಂಡಿವೆ....ಇವು ಅವನ ಭಾವುಕತನವನ್ನೂ ರುಚಿ ಸಂಸ್ಕಾರದ ಉನ್ನತಿಯನ್ನೂ ತೋರಿಸು ಇವೆ. ಇಂಥ ಪ್ರಯೋಗಗಳು ವ್ಯಾಕರಣದ ಅಭ್ಯಾಸಕ್ಕೂ ರಸದ ಲೇಪ ವನ್ನು ಬಳಿಯುತ್ತವೆ....ಈ ಕವಿಮನಕ್ಕಿಂತ ಕೇಶಿರಾಜನ ಶಾಸ್ತ್ರಿಮನ ಹೆಚ್ಚು ಪ್ರಶಂಸನೀಯನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗ ಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ ಪ್ರಾಮಾಣಿಕತೆಗಳು, ಸಂದೇಹ ಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ಥ್ಯ, ತನಗೆ ಒಪ್ಪಿಗೆಯಲ್ಲದಿರುವುದನ್ನು ಕಂಡೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೊಡುವುದರಲ್ಲಿ ಕಾಣಿಸಿರುವ ನಿಷ್ಪಕ್ಷಪಾತ ದೃಷ್ಟಿ, ಆತ್ಮವಂಚನೆ ಪರವಚನೆಗಳ ಅಭಾವ-ಇವೆಲ್ಲ ಕೇಶಿರಾಜನ ವೈಜ್ಞಾನಿಕ ಮನೋಧರ್ಮವನ್ನು ತೋರಿಸುತ್ತವೆ....’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2024 Book Brahma Private Limited.