ಡಿ.ಎಲ್. ನರಸಿಂಹಾಚಾರ್
(27 October 1906 - 01 May 1971)
ಪಂಡಿತ- ಸಂಶೋಧಕ ಶ್ರೇಷ್ಠ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರನ್ನು ಕನ್ನಡ ಸಾಹಿತ್ಯ- ಸಂಶೋಧನೆಗೆ ಸಂಬಂಧಿಸಿದಂತೆ ಚಲಿಸುವ ವಿಶ್ವಕೋಶ ಎಂದು ಗುರುತಿಸಲಾಗುತ್ತಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 1906ರ ಅಕ್ಟೋಬರ್ 27ರಂದು ಜನಿಸಿದರು. ತಂದೆ ಶ್ಯಾಮಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ 1924ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಎಂ.ಎ. ಪದವಿ (1929) ಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತ (1930) ಆಗಿ ನೇಮಕವಾದರು. ಕನ್ನಡ ಅಧ್ಯಾಪಕ (1939), ಪ್ರಾಧ್ಯಾಪಕ (1956) ಆಗಿ ...
READ MORE