ಕನ್ನಡ ನಾಡಿನ ಹಾಸ್ಯ ಸಾಹಿತಿಗಳಲ್ಲಿ ಅಗ್ರಮಾನ್ಯ ಲೇಖಕಿ ಟಿ. ಸುನಂದಮ್ಮ. ಹಾಸ್ಯ ನಿಯತಕಾಲಿಕೆ ಕೊರವಂಜಿಯಲ್ಲಿ ‘ನಾನ್ಕಾರಿಟ್ಟಿದ್ದು’ ಎಂಬ ನಗೆ ಲೇಖನದ ಮೂಲಕ ಹಾಸ್ಯ ಸಾಹಿತ್ಯ ಪ್ರಪಂಚವನ್ನು ಪ್ರವೇಶ ಮಾಡಿದ್ದು, ತಮ್ಮ ಕಲ್ಪನೆಯ ದಂಪತಿ ಮೈಲಾರಯ್ಯ-ಸರಸು ಮೂಲಕ ಕನ್ನಡದ ಓದುಗರನ್ನು ನಕ್ಕು ನಗಿಸಿ ವಿಡಂಬನೆಯ ಮೂಲಕ ತಿದ್ದಿದರು.
ನಗೆ ಸಾಹಿತ್ಯವನ್ನು ಹೊರತುಪಡಿಸಿ ಅನೇಕ ರೇಡಿಯೋ ರೂಪಕಗಳನ್ನು ಬರೆದಿದ್ದಾರೆ. ಸದಭಿರುಚಿಯ ಹಾಸ್ಯ ಲೇಖನಗಳು, ನಾಟಕಗಳು, ಕವಿತೆಗಳನ್ನು ರಚಿಸಿ ಜನಮಾನಸದಲ್ಲಿ ನೆಲೆಯೂರಿದವರು. ಕನ್ನಡದ ಹಾಸ್ಯ ಜಗತ್ತನ್ನು ವಿಸ್ತರಿಸಿದ ಕೀರ್ತಿ ಸುನಂದಮ್ಮನವರಿಗೆ ಸಲ್ಲುತ್ತದೆ. ಅವರ ವೈವಿಧ್ಯಮಯ ವಿಷಯಗಳ ಹರಹು ಅವರ ಲೇಖನಗಳ ಸಂಗ್ರಹವನ್ನು ಭುವನೇಶ್ವರಿ ಹೆಗಡೆ ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.
©2024 Book Brahma Private Limited.