ನಯಸೇನ ದೇವ ಹನ್ನೆರಡನೇ ಶತಮಾನದ ಆದಿಭಾಗದಲ್ಲಿದ್ದ ಪ್ರಮುಖ ಕವಿ. ಕನ್ನಡ ಕವಿರತ್ನತ್ರಯರು ಎಂದು ಪ್ರಸಿದ್ಧಿಯಾದ ಪ್ರಮುಖ ಕವಿಗಳಾದ ಪಂಪ , ಪೊನ್ನ,ರನ್ನ ಇವರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗವನ್ನು ಹಿಡಿಯದೆ, ಆ ಮಾರ್ಗವನ್ನು ಹೊಡೆದು ತನ್ನದೇ ಆದ ಹೊಸ ದಾರಿಯನ್ನು ಹುಡುಕಿಕೊಂಡ ಇವರು ರಚಿಸಿದ ವಿಶಿಷ್ಟ ಕೃತಿ ಈ ಧರ್ಮಾಮೃತಂ. ಇದೊಂದು ವಿಡಂಬನಾ ಕಾವ್ಯವಾಗಿದ್ದು ಇವನು ಪರಧರ್ಮ, ಪರಮತವನ್ನು ಮಾತ್ರವಲ್ಲದೆ ತನ್ನ ಮತೀಯರನ್ನೂ ವಿಡಂಬನೆ ಮಾಡಿದ್ದು ಕಂಡು ಬರುತ್ತದೆ. ಈ ವಿಡಂಬನೆಯಲ್ಲಿ ವಿಮರ್ಶೆಯೂ ಕೂಡ ಒಳಗೊಂಡಿರುತ್ತದೆ. ತನ್ನ ಧರ್ಮದ ಅನುಯಾಯಿಗಳನ್ನೇ ಶೋಧಿಸುವ ಇವನ ಕಾರ್ಯದಲ್ಲಿರುವ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಶುಭಚಂದ್ರರು ಈ ಕೃತಿಯನ್ನು ಸಂಪಾದಿಸಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.
©2024 Book Brahma Private Limited.