ಬಸವಕಲ್ಪಧ್ರುವಂ

Author : ಎಸ್. ಆರ್. ಚನ್ನವೀರಪ್ಪ

Pages 288

₹ 200.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಲಯ, ಹಂಪಿ
Phone: 08022372388

Synopsys

'ಬಸವ' ಕವಿಯ 'ಬಸವಕಲಧ್ರುವಂ' ಕಾವ್ಯವು ಮೂಲತಃ ವರ್ಣಕ ಕಾವ್ಯ. ಬಸವಣ್ಣನವರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಶಿವಶರಣರ ಚರಿತ್ರೆಗಳು ಈ ಕಾವ್ಯದಲ್ಲಿವೆ. ಕವಿ ಈ ಕಾವ್ಯದಲ್ಲಿ ಬಸವಣ್ಣನವರನ್ನು ಇತರ ಶಿವಶರಣರ ಜೊತೆಗೆ ಸಮೀಕರಣ ಮಾಡುವುದರ ಮೂಲಕ ವೀರಶೈವ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಲು ಪ್ರಯತ್ನಿಸಿರುವನು. 17ನೇ ಶತಮಾನದ ಮಧ್ಯಭಾಗದಲ್ಲಿ ಬದುಕಿದ ಈ ಕವಿಯ ಕುರಿತು ಎಸ್.ಆರ್. ಚನ್ನವೀರಪ್ಪನವರು ಬರೆದಿದ್ದಾರೆ.

About the Author

ಎಸ್. ಆರ್. ಚನ್ನವೀರಪ್ಪ

ಹಸ್ತಪ್ರತಿಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಎಸ್ ಆರ್ ಚನ್ನವೀರಪ್ಪ ಅವರು ೧೯೭೧ ಎಪ್ರಿಲ್ ೧ ರಂದು ಜನಿಸಿದರು. ಎಂ, ಎ , ಪಿಎಚ್ ಡಿ ಪದವೀಧರರಾದ ಅವರು ಹಸ್ತ ಪ್ರತಿಶಾಸ್ತ್ರ,ಗ್ರಂಥ ಸಂಪಾದನೆ, ಮಧ್ಯಕಾಲೀನ ಕನ್ನಡ ಸಾಹಿತ್ಯ, ಮುಂತಾದ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ ಮತ್ತು ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನೆ, ಪ್ರಾಚೀನ ಕನ್ನಡ ಸಾಹಿತ್ಯ, ಮಧ್ಯಕಾಲೀನ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ ಇತ್ಯಾದಿ ಅವರ ಪ್ರಮುಖ ಅಧ್ಯಯನದ ಆಸಕ್ತಿಯ ಕ್ಷೇತ್ರಗಳಾಗಿವೆ.ನಾಗಲಿಂಗಸ್ವಾಮಿ ತತ್ವಪದಗಳು, ಸ್ವರಚನೆ ತರಂಗ-೧, ದಾಸರಾಯರ ಪದಗಳು, ಕೃತಿ ಪ್ರವೇಶ,ಅವರ ಪ್ರಮುಖ ಪ್ರಕಟಗೊಂಡ ಕೃತಿಗಳಾಗಿವೆ.ಗಾಣದ ಕಲೆ , ದೇಸಿ ಸಾಹಿತ್ಯ ಸಂಪಾದನೆ, ಬಿಜಾಪುರ ...

READ MORE

Related Books