ಈ ಕೃತಿಯಲ್ಲಿ ಕನ್ನಡ ಹಸ್ತಪ್ರತಿ ಮತ್ತು ಗ್ರಂಥಸಂಪಾದನಾಶಾಸ್ತ್ರದ ಪರಂಪರಾಗತ ಅಧ್ಯಯನ ನೆಲೆಗಳನ್ನು ಪ್ರಶ್ನಿಸುತ್ತಲೇ ಹೊಸ ಸಂಶೋಧನ ವಿನ್ಯಾಸಗಳನ್ನು ರೂಪಿಸುವ ಅಧ್ಯಯನವಿದೆ. ಮಾತೃಕೆಯ ಮೂಲಕ ರೂಪು ತಾಳುವ ವಂಶ ವೃಕ್ಷದ ಮಾದರಿಯನ್ನು ನಿರಾಕರಿಸಿ ಸಾಂಸ್ಕೃತಿಕ ಮಹತ್ವದ ನಿರ್ಮಾಣಗಳಾಗಿ ಬಹುಪತ್ನಿಯ ನಲೆಗಳು ಕಾಣಿಸಿಕೊಳ್ಳುವ ಬಗೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಬರಹ ಎನ್ನುವುದು ಸಾಂಸ್ಕೃತಿಕ ಯಾಜಮಾನ್ಯದ ನಿರ್ಮಾಣವಾಗಿ ಅನೇಕ ಬಾರಿ ಪ್ರಭುತ್ವದ ಆಶ್ರಯದಲ್ಲಿಯೇ ಅವಕಾಶ ಪಡೆದ ಮಿತಿಗಳನ್ನು ಇಲ್ಲಿ ವಿವೇಚಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಧರ್ಮ , ಅರ್ಥ ,ಕಾಮ , ಮೋಕ್ಷ
©2025 Book Brahma Private Limited.