ಕನ್ನಡದಲ್ಲಿ ದುರ್ಗ ಸಿಂಹನ ಪಂಚತಂತ್ರವೇ ಹೆಚ್ಚು ಬಳಕೆಯಲ್ಲಿದೆ. ಆದರೆ, ವಿಷ್ಣುಶರ್ಮನ ಸಂಪ್ರದಾಯಕ್ಕೆ ಸೇರಿದ ಈ ಕೃತಿಯು ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಕನ್ನಡದ ಜನ-ಮನ-ಮಾತಿನ ಉಳಿಕೆ-ಬೆಳಕೆ, ಆತಂಕ ಅನುಭವಗಳಾಗಿ ಇಲ್ಲಿಯ ಕಥಾಜಗತ್ತು ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಸಮೀಪದ ಮಿಂಚೇರಿ ಗ್ರಾಮದ ಬಸವನೆಂಬ ಲಿಪಿಕಾರ ಇದನ್ನು ಲಿಪೀಕರಿಸಿದ್ದು, ಉತ್ತರ ಕರ್ನಾಟಕದ ಭಾಷೆ ಹಾಗೂ ಸೊಗಡು ಇಲ್ಲಿಯ ಕಥೆಗಳಲ್ಲಿ ನಲಿದಾಡುತ್ತಿದೆ. ಪ್ರತಿ ಕಥೆಯೂ ಚಲನಶೀಲ ಪಠ್ಯವಾಗಿ ಕಾಣುತ್ತದೆ. ಗ್ರಂಥ ಸಂಪಾದನೆಯ ಶುದ್ಧ-ಅಶುದ್ಧ ಕಲ್ಪನೆಗಳನ್ನು ಮೀರಿ ಹೆಚ್ಚು ಸೃಜನಾತ್ಮಕವಾಗಿ ದೇಸೀಯತೆಯನ್ನು ಎತ್ತಿ ಹಿಡಿಯುವ ಸಂಪಾದಕರ ಕ್ರಮವೂ ಹೊಸ ಪ್ರಯೋಗಗಳನ್ನು ಗರ್ಭೀಕರಿಸಿಕೊಂಡಿದೆ.
©2025 Book Brahma Private Limited.