ಕನ್ನಡ ಹಸ್ತಪ್ರತಿ ಮತ್ತು ಗ್ರಂಥಸಂಪಾದನೆ ದೃಷ್ಟಿಯಿಂದ ಆರಂಭದ ಪ್ರವರ್ತಕರಲ್ಲಿ ಮುಖ್ಯರಾದ ಹೆರ್ಮನ್ ಮೊಗ್ಲಿಂಗ್ ಬಗ್ಗೆ ವಿಶೇಷವಾದ ಮತ್ತು ಅಧ್ಯಯನಶೀಲವಾದ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ. ಮೋಗ್ಲಿಂಗ್ ಅವರ ಸಂಪಾದನೆಯ ಸ್ವರೂಪ ಮತ್ತು ಮಾದರಿಗಳನ್ನು ಇಲ್ಲಿ ವಿಶೇಷವಾಗಿ ಚರ್ಚಿಸಿದ್ದು, ಗ್ರಂಥಸಂಪಾದನೆಯ ಹಿಂದಿನ ಮನೋಧರ್ಮ ಕುರಿತ ವಿಶಿಷ್ಟ ಸಂವಾದ ಕೂಡಾ ಇಲ್ಲಿದೆ. ಹೀಗಾಗಿ ಒಂದೆಡೆ ಹಸ್ತಪ್ರತಿ ಪರಂಪರೆ ಮತ್ತು ಮೋಗ್ಲಿಂಗ್ ಕುರಿತ ಚರ್ಚೆ, ಮತ್ತೊಂದಡೆ ಗ್ರಂಥಸಂಪಾದನೆಯನ್ನು ಹೊಸದಾಗಿ ಪುನರ್ ನಿರ್ಮಿಸುವ ಆಧುನಿಕ ದೃಷ್ಟಿಕೋನ ಇವರಡೂ ಈ ಗ್ರಂಥದಲ್ಲಿ ಪ್ರತಿಫಲನಗೊಂಡಿರುವುದು ಈ ಕೃತಿಯ ವಿಶೇಷ. ಈ ಕೃತಿಯ ಶಬ್ದದ ಅರ್ಥದ ಕುರಿತು ತಪಸ್ಸು ಮುಖ್ಯ , ಹಸ್ತಪ್ರತಿಗಳ ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ ,ಗ್ರಂಥಸಂಪಾದನೆ ಮತ್ತು ಮೋಗ್ಲಿಂಗ್ , ಕೊಡಗಿನ ಸಾಂಸ್ಕೃತಿಕ ಚರಿತ್ರೆ ಮತ್ತು ಮೊಗ್ಲಿಂಗ್ , ಮೌಖಿಕ ಸಾಹಿತ್ಯ ಸಂಪಾದನೆ ಮತ್ತು ಮೋಗ್ಲಿಂಗ್ , ಕನ್ನಡ ಗ್ರಂಥಸಂಪಾದನ, ಕನ್ನಡ ಪತ್ರಿಕೋದ್ಯಮ ಮತ್ತು ಮೋಗ್ಲಿಂಗ್ , ಅಖಂಡ ಕರ್ನಾಟಕದ ಮೊದಲ ಕಲ್ಪನ : ಮೊಗ್ಲಿಂಗ್ ,ಕರ್ನಾಟಕದಲ್ಲಿ ಬಾಸೆಲ್ ಮಿಷನ್ ಸಾಧನ , ಪಠ್ಯದ ಚಲನಶೀಲತ ,ಗ್ರಂಥಸಂಪಾದನೆ ಹಿಂದಿನ ಮನೋಧರ್ಮಗಳು ಎಂಬ ವಿಷಯಗಳನ್ನು ಒಳಗೊಂಡಿದೆ.
©2025 Book Brahma Private Limited.