ಮಧು ಉಪಾಧ್ಯಯ ಸಂಗೀತ ಮತ್ತು ರಂಗಭೂಮಿಯ ಕುರಿತ ವಿಮರ್ಶೆಗಳನ್ನು ಇಂಗ್ಲಿಷ್ ದೈನಿಕಗಳಿಗೆ ಹಾಗೂ ಪತ್ರಿಕೆಗಳಿಗೆ ಬರೆಯುತ್ತಿದ್ದ ಪ್ರಮುಖ ವಿಮರ್ಶಕ. ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪಡೆದವರು. ಹೆಸರಾಂತ ಕಲಾವಿದರೊಂದಿಗೆ ಮಧು ಉಪಾಧ್ಯಾಯರು ನಡೆಸಿದ ವಿಸ್ತೃತವಾದ ಮಾತುಕಥೆ ಮತ್ತು ಸಂದರ್ಶನಗಳಲ್ಲಿ ಆಯ್ದ ಕೆಲವನ್ನು "ಸೃಜನ ಶೀಲ ಪ್ರತಿಭೆ" ಒಳಗೊಂಡಿದೆ. ಈ ಪುಸ್ತಕದ ಮೊದಲ ಭಾಗ ಸಂಗೀತಗಾರರಿಗೆ ಮೀಸಲಾಗಿದ್ದು, ಎರಡು ಮತ್ತು ಮೂರನೆಯ ಭಾಗಗಳಲ್ಲಿ ಅನುಕ್ರಮವಾಗಿ ರಂಗಭೂಮಿಯ ತಜ್ಞರು, ಕಲಾವಿದರು ಹಾಗೂ ಬರಹಗಾರರನ್ನು ಕುರಿತ ಬರಹಗಳಿವೆ.
©2025 Book Brahma Private Limited.