ಲೇಖಕ ಚಿದಾನಂದ ಸಾಲಿಯವರು ಭಾರತದ ಹಲವು ಸಾಹಿತ್ಯ ಪ್ರತಿಭೆಗಳೊಂದಿಗೆ ನಡೆಸಿದ ಮುಖಾಮುಖಿಗಳು ’ಕಾಲಕನ್ನಡಿ'ಯಲ್ಲಿವೆ. ಕಲಾವಿದರು ಹಾಗೂ ಸಾಹಿತಿಗಳ ಖಾಸಗಿ ಲೋಕದ ಪ್ರಶ್ನೆಗಳು, ಅವರ ಕಲೆಯ ಸ್ವರೂಪ ಹಾಗೂ ಕಾಲದ ವಿದ್ಯಮಾನಗಳಿಗೆ ಅವರ ಸ್ಪಂದನೆಗಳನ್ನು ದಾಖಲಿಸುವ ಕೆಲಸವನ್ನೂ ಈ ಪುಸ್ತಕ ಪರಿಚಯಿಸುತ್ತದೆ. ಸಾಲಿಯವರ ಕಥನ ಪ್ರತಿಭೆ ಹಾಗೂ ತಾವು ಸಂದರ್ಶಿಸುತ್ತಿರುವವರ ಕಲಾವಿದರ, ಸಾಹಿತಿಗಳ ಕೃತಿಗಳ ಬಗೆಗಿನ ವಿಮರ್ಶಾತ್ಮಕ ಗ್ರಹಿಕೆಗಳು ಕೂಡ ಸ್ಪಷ್ಟವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಭಾರತದ ಸಾಹಿತ್ಯ ಚಳುವಳಿಗಳು ಹಾಗೂ ಸಾಮಾಜಿಕ ಚಳುವಳಿಗಳ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳು ರೂಪುಗೊಳ್ಳುವ ವಿಶಿಷ್ಟ ರೀತಿಗಳನ್ನೂ ಸಂದರ್ಶನದ ಮಾತುಕತೆಗಳ ರೂಪದಲ್ಲಿ ಹೊರತಂದಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕತಿಗೆ ಅಗತ್ಯವಾಗಿರುವ ಹೊಸ ಪ್ರೇರಣೆಗಳನ್ನೂ ಹುಡುಕುವ ’ ಕಾಲ ಕನ್ನಡಿ' ಪುಸ್ತಕ ಭಾರತೀಯ ಸಾಹಿತ್ಯದ ವಿಭಿನ್ನ ಧಾರೆಗಳನ್ನೂ ಭಾರತದ ಹಲವು ಕಲಾಪ್ರಕಾರಗಳನ್ನೂ ತೌಲನಿಕವಾಗಿ ಅರಿಯಬಯಸುವವರಿಗೆ ಉತ್ತಮ ಆಕರವಾಗಿದೆ.
©2024 Book Brahma Private Limited.