ತೌಲನಿಕ ಸಾಹಿತ್ಯಾಧ್ಯಯನ ಎಂಬುದು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಿತ ಕೃತಿ. ತತ್ವ, ವ್ಯಾಪ್ತಿ ಹಾಗೂ ಜಿಜ್ಞಾಸೆಗಳನ್ನು ಒಳಗೊಂಡಿದೆ ಎಂಬುದು ಉಪಶೀರ್ಷಿಕೆ ಸೂಚಿಸುತ್ತದೆ. ಯಾವುದೇ ಸಾಹಿತ್ಯವನ್ನು ಮತ್ತೊಂದು ಸಾಹಿತ್ಯದೊಂದಿಗೆ ತೌಲನಿಕವಾಗಿ ಅಧ್ಯಯನ ಮಾಡಬೇಕಾದರೆ ಅದರ ಮೂಲತತ್ವಗಳು, ಅದರ ವ್ಯಾಪ್ತಿ ಹಾಗೂ ವಿಸ್ತಾರ ಮತ್ತು ವಿಶ್ಲೇಷಣೆಗಳೊಂದಿಗೆ ಚರ್ಚೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ, ಜಿಜ್ಞಾಸೆ ನಡೆಸಿದ ಲೇಖನಗಳನ್ನು ಸಂಗ್ರಹಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೂ ಈ ಕೃತಿ ಉಪಯುಕ್ತವಾಗಿದೆ.
©2025 Book Brahma Private Limited.