ಸುನಾಥ ದೇಶಪಾಂಡೆ ಎಂದೇ ಖ್ಯಾತಿಯ ಎಸ್.ಎಲ್. ದೇಶಪಾಂಡೆ ಅವರ ಕೃತಿ-ಬೇಂದ್ರೆ ಶರೀಫರ ಕಾವ್ಯಯಾನ. 18ನೇ ಶತಮಾನದಲ್ಲಿ ಆಗಿ ಹೋದ ಶರೀಫರ ತತ್ವಪದಗಳನ್ನು 19ನೇ ಶತಮಾನದ ಅಂಬಿಕಾತನಯ ದತ್ತರ ಕಾವ್ಯಗಳೊಂದಿಗೆ ಸಮೀಕರಿಸಿ, ಹೆಚ್ಚುಗಾರಿಕೆಯನ್ನು, ವೈವಿಧ್ಯತೆಯನ್ನು ಗುರುತಿಸಿ ವಿಶ್ಲೇಷಿಸುವ ಮೂಲಕ ಓದುಗರಿಗೆ ಮಾತ್ರ ಉತ್ತಮ ಕಾವ್ಯದ ರಸದೌತಣ ಬಡಿಸಿದ್ದಾರೆ. ಬೇಂದ್ರೆ ಅವರು 38 ಕವನಗಳು ಹಾಗೂ ಶರೀಫರ 9 ಕವನಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದು, ಈ ಎಲ್ಲ ಲೇಖನಗಳು ಲೇಖಕರ ‘ಸಲ್ಲಾಪ’ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಈ ಎರಡೂ ಕವಿಗಳ ಕಾವ್ಗಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಉತ್ತಮ ಆಕರ ಒದಗಿಸುತ್ತದೆ.
©2025 Book Brahma Private Limited.