'ಸಾಹಿತ್ಯ ಮತ್ತು ಪುರಾಣ'- ಸಹಸಂಬಂಧಗಳ ಅಧ್ಯಯನ ತೌಲನಿಕ ಕ್ಷೇತ್ರದಲ್ಲಿ ಒಂದು ಅಮೂಲ್ಯ ಕೃತಿ. ಇದು ಅತ್ತ ಸಾಹಿತ್ಯವನ್ನೂ ಇತ್ತ ಪುರಾಣವನ್ನೂ ಒಂದು ಸಮಗ್ರ ನಿಟ್ಟಿನಲ್ಲಿ ನೋಡುವ ಗ್ರಂಥವಾಗಿದೆ. ಪ್ರೊ. ಮಲ್ಲೇಪುಂ ಜಿ. ವೆಂಕಟೇಶ ಅವರ ಅಪಾರವಾದ ವೈದುಷ್ಯ. ತೌಲನಿಕ ಜ್ಞಾನ, ಪ್ರಾಚೀನ ಸಾಹಿತ್ಯ ಕುರಿತ ಸೂಕ್ಷ್ಮ ತಿಳಿವಳಿಕೆಗಳು- ಈ ಗ್ರಂಥದ ಉದ್ದಕ್ಕೂ ಹೆಪ್ಪುಗಟ್ಟಿವೆ. ಈಚೀಚೆಗೆ ಅಂತರ್ ಶಿಸ್ತೀಯ ಅಧ್ಯಯನಗಳು ನಡೆಯುತ್ತಿವೆಯಷ್ಟೇ. ಇಂಥ ಅಧ್ಯಯನಗಳು ತೌಲನಿಕ ಕ್ಷೇತ್ರದಲ್ಲಿ ಪ್ರವೇಶ ಮಾಡಿವೆ. ಹೀಗಾಗಿ ಹೊಸ ಜೀವಗಳನ್ನೂ ಪ್ರಾಣಗಳನ್ನೂ ಸಾಧನಗಳನ್ನೂ ಇದು ಪ್ರಧಾನ ಮಾಡಿದೆ. ಇಂಥ ಅಂತರ್ ಶಿಸ್ತೀಯ ಕ್ಷೇತ್ರವನ್ನು ಆಯ್ದುಕೊಂಡು ರಚಿತವಾದ ಈ ಗ್ರಂಥ, ಹಲವು ಬಗೆಯ ಓದುಗರಿಗೆ ಉಪಯುಕ್ತ ತಿಳಿವಳಿಕೆಯನ್ನು ನೀಡುತ್ತದೆ.
©2025 Book Brahma Private Limited.