‘ಅರಿಷ್ಟನೇಮಿ ಎಂಬ ರೂಪಕ’ ಶಿಲ್ಪಿಕಥನಗಳಲ್ಲಿ ಯಾಜಮಾನ್ಯದ ವಿನ್ಯಾಸ ಕುರಿತು ತೌಲನಿಕ ಅಧ್ಯಯನ. ಬಾಲಕೃಷ್ಣ ಹೊಸಂಗಡಿ ಅವರ ಕೃತಿ. ಹಿರಿಯ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಬಾಲಕೃಷ್ಣ ಹೊಸಂಗಡಿ ಅವರ ಅರಿಷ್ಟನೇಮಿ ಎಂಬ ರೂಪಕ- ಶಿಲ್ಪಕಥನಗಳಲ್ಲಿ ಯಾಜಮಾನ್ಯದ ವಿನ್ಯಾಸ ಕುರಿತ ತೌಲನಿಕ ಅಧ್ಯಯನ ಎಂಬ ಕೃತಿ ನಮಗೆ ಮುಖ್ಯವಾಗುವುದು ಅದು ಹಿಡಿದ ನವೀನ ಹಾದಿಯಿಂದ. ಅಂದರೆ ಲೇಖಕರು ವಿಷಯ ಮಂಡನೆಗೆ ಆಯ್ದುಕೊಂಡ ವಿಧಾನವೇ ಇಲ್ಲಿ ಹೊಸತಾದದ್ದು ಎನ್ನುತ್ತಾರೆ ಬಿಳಿಮಲೆ. ಸಂಶೋಧನೆಯ ವೈಧಾನಿಕತೆಯನ್ನು ಎಚ್ಚರದಿಂದ ಮಾರ್ಪಡಿಸಿಕೊಂಡರೆ ಅದು ಓದುಗರನ್ನು ಹೊಸ ತಿಳುವಳಿಕೆಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತದೆ ಎಂಬ ಅಂಶ ಈ ಪುಸ್ತಕದಲ್ಲಿ ಸೊಗಸಾಗಿ ಅನಾವರಣಗೊಂಡಿದೆ. ಹೊಸಂಗಡಿಯವರು ಲಿಖಿತ ಪಠ್ಯಗಳು ಹಾಗೂ ಮೌಖಿಕ ನಿರೂಪಣೆಗಳನ್ನು ಶಿಲ್ಪ ಕಥನಗಳಿಗೆ ಬಳಸಿಕೊಂಡಿರುವುದೇ ಇಲ್ಲಿನ ವಿಶೇಷ. ಶಿಲ್ಪ ಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿದ ಹೆಚ್ಚಿನ ವಿದ್ವಾಂಸರು ಲಿಖಿತ ಪಠ್ಯಗಳನ್ನು ಆಧರಿಸಿಯೇ ತಮ್ಮ ಕಥನಗಳನ್ನು ಕಟ್ಟಿದ್ದಾರೆ.
©2024 Book Brahma Private Limited.