‘ಕನ್ನಡ ರಾಮಾಯಣಗಳಲ್ಲಿ ರಾವಣ’ ಲೇಖಕ ವಿವೇಕಾನಂದ ಸಜ್ಜನ ಅವರ ತೌಲನಿಕ ಅಧ್ಯಯನದ ಕೃತಿ. ರಾಮಾಯಣಕ್ಕೆ ಕಾರಣವಾಗುವ 'ರಾವಣ'ನ ಪಾತ್ರವನ್ನು ಕಂಡ ಬಗೆಯ ವಿವರಗಳ ಸಂಗ್ರಹ ಇಲ್ಲಿದೆ.
ರಾಮಾಯಣದ ರಾವಣನ ವಿವರಗಳನ್ನುಅಧ್ಯಯನದ ದೃಷ್ಟಿಯಿಂದ ವಿಂಗಡಿಸಿದ್ದು, ಕವಿಗಳ ಬದುಕು ಬರೆಹದ ಭಾಗದಲ್ಲಿ ಸಂಸ್ಕೃತ ಕವಿ ವಾಲ್ಮೀಕಿ ಹಾಗು ಕನ್ನಡದ ಕವಿಗಳಾದ ನಾಗಚಂದ್ರ, ಮುದ್ದಣ, ಕುವೆಂಪು ಅವರ ಜೀವನ-ಬರೆಹಗಳ ವಿವರ ಕೊಡಲಾಗಿದೆ. ನಂತರ ರಾಮಾಯಣ, ನಾಗಚಂದ್ರನ ರಾಮಚಂದ್ರಚರಿತ ಪುರಾಣ, ಮುದ್ದಣನ ಅದ್ಭುತ ರಾಮಾಯಣ ಹಾಗೂ ಕುವೆಂಪು ಅವರ ರಾಮಾಯಣದರ್ಶನಂ ಕೃತಿಗಳಲ್ಲಿ ಮೂಡಿ ಬಂದ ರಾವಣನ ಪಾತ್ರದ ವಿವಿಧ ಆಯಾಮಗಳ ಕುರಿತ ಚರ್ಚೆ ಇದೆ.
©2025 Book Brahma Private Limited.