`ಕನ್ನಡ ಭಾಷಾ ಕೌಶಲ ಕಲಿಕೆ ಬೋಧನೆ’ ಅಬ್ದುಲ್ ರೆಹಮಾನ್ ಪಾಷ ಅವರ ಅಧ್ಯಯನ ಕೃತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾಷಾ ಅಧ್ಯಯನವನ್ನು ಅನುತ್ಪಾದಕ' ಎಂದು ಭಾವಿಸಲಾಗುತ್ತಿದೆ. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವುದು, ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಬೆನ್ನು ಹತ್ತಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇದರ ಪರಿಣಾಮವೋ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದುತ್ತಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿರಿಯ ಗೆಳೆಯರಾದ ಅಬ್ದುಲ್ ರೆಹಮಾನ್ ಪಾಷರವರು ಭಾಷಾ ಕಲಿಕೆಯ ವಿಚಾರದಲ್ಲಿ ಮಾಡುತ್ತಿರುವ ಚಿಂತನೆಗಳಿಗೆ ಐತಿಹಾಸಿಕ ಮಹತ್ವವಿದೆ. ಈ ವಿಷಯದಲ್ಲಿ ಅವರು ಸಾಂಪ್ರದಾಯಕ ಕ್ರಮಗಳನ್ನು ತ್ಯಜಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು ಎಂಬ ನಾಲ್ಕು ಭಾಷಾ ಕೌಶಲ್ಯಗಳನ್ನು ಆಧರಿಸಿ ಈ ಕೈಪಿಡಿಯನ್ನು ಸಿದ್ಧಪಡಿಸಿದ್ದಾರೆ. ಹಾಗೆ ಮಾಡುವಾಗ ಅವರು ವಿದೇಶೀ ಚಿಂತನಾ ಕ್ರಮಗಳನ್ನು ಕಣ್ಣುಮುಚ್ಚಿ ಅನುಸರಿಸದೆ, ತಮ್ಮದೇ ಆದ ಕೆಲವು ಹೊಸ ವಿಧಾನಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಒಟ್ಟು ಚರ್ಚೆಗಳನ್ನು ಕನ್ನಡ ಭಾಷಾ ಸಂದರ್ಭದಲ್ಲಿರಿಸಿ ಚರ್ಚಿಸಿದ್ದಾರೆ. ಹೀಗಾಗಿ, ನಿಸ್ಸಂದೇಹವಾಗಿ ಕನ್ನಡಿಗರಿಗೆ ಬಹು ಇದು ಉಪಯುಕ್ತವಾದ ಕೈಪಿಡಿ ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ವರ್ತಮಾನದ ಕೆಲವು ಅಗತ್ಯಗಳನ್ನು ಪೂರೈಸುವ ಶಕ್ತಿ ಈ ಕೈಪಿಡಿಗಿದೆ. ಇಲ್ಲಿರುವ ಸಲಹೆ ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಕನ್ನಡ ಕಲಿಕೆಯ ಸಾಧ್ಯತೆಗಳು ಬಹುವಾಗಿ ವಿಸ್ತರಿಸಿಕೊಳ್ಳಬಲ್ಲವು.
©2024 Book Brahma Private Limited.