‘ಬಸವಣ್ಣ ಹಾಗು ಮಾರ್ಟಿನ್ ಲೂಥರ್’ ಚಿಂತನೆಗಳ ತೌಲನಿಕ ಅಧ್ಯಯನ ಕೃತಿಯು ಅಲ್ಲಮಪ್ರಭು ಸ್ವಾಮಿಗಳ ಅಧ್ಯಯನ ಕೃತಿಯಾಗಿದೆ. ಕೆಲವೊಂದು ವಿಚಾರಗಳು ಹೀಗಿವೆ;ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬಸವಣ್ಣನವರು ಹಾಗೂ ಮಾರ್ಟಿನ್ ಲೂಥರ್ ಈರ್ವರೂ ಧರ್ಮಗುರುಗಳು: ಸಮಾಜ ಸುಧಾರಕರು: ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಅಂಧಶ್ರದ್ಧೆ ಹಾಗೂ ಶೋಷಣೆಗಳನ್ನು ವಿರೋಧಿಸಿದವರು. ಇಬ್ಬರ ಕಾಲ-ದೇಶಗಳು ಬೇರೆ ಬೇರೆಯಾಗಿದ್ದರೂ ಸಮಾಜೋ-ಧಾರ್ಮಿಕ ಅಭಿವೃದ್ಧಿಯ ಧ್ಯೇಯ ಧೋರಣೆಗಳು ಒಂದೇ ಆಗಿವೆ. ಇಬ್ಬರೂ ಸಮಾಜೋ-ಧಾರ್ಮಿಕ ಚಳುವಳಿಯ ಪ್ರಭಾವಿ ನಾಯಕರು: ವಿಚಾರವಾದಿಗಳು: ಸಾರ್ವಕಾಲಿಕ ಗುಣವುಳ್ಳವರು. ಪ್ರವೃತ್ತಿ ಮಾರ್ಗದ ಪ್ರವರ್ತಕರು: ಹಾಗೆಯೇ, ಚಿಂತನಶೀಲ ಪರಂಪರೆಯನ್ನೇ ಸೃಷ್ಟಿಸಿದವರು. ಡಾ.ಅಲ್ಲಮಪ್ರಭು ಸ್ವಾಮಿಗಳು ಅಧ್ಯಯನಶೀಲರು, ಚಿಕಿತ್ಸಕ ದೃಷ್ಟಿಯುಳ್ಳವರು; ಹಾಗೆಯೇ ಲೋಕಹಿತ ಸಾಧಕರು. ಬಸವಣ್ಣ ಹಾಗೂ ಮಾರ್ಟಿನ್ ಲೂಥರ್ ಚಿಂತನೆಗಳನ್ನು ಕುರಿತು ತಲಸ್ಪರ್ಶಿ ಅಧ್ಯಯನ ಕೈಗೊಂಡು ಈ ಪ್ರೌಢ ಪ್ರಬಂಧವನ್ನು ರಚಿಸಿದ್ದಾರೆ. ಅವರ ಕುತೂಹಲ ಪ್ರಶ್ನಾತೀತ, ಕೃತಿಯುದ್ಧಕ್ಕೂ ಅವರ ಪ್ರಾಮಾಣಿಕತೆ, ಪ್ರತಿಭೆ ಮತ್ತು ಕ್ರಿಯಾಶೀಲತೆಗಳು ಚಲ್ಲುವರಿದಿವೆ. ಅವರು ಸಂಶೋಧನೆಗಾಗಿ ಸಂಶೋಧನೆಯ ಕಾರ್ಯ ಕೈಕೊಂಡವರಲ್ಲ: ಅಗತ್ಯದ ತಳಹದಿಯೊಂದಿಗೆ ಸಂಶೋಧನೆ ನಡೆಸಿದವರು. ಹಾಗಾಗಿ, ಕೃತಿ ಅರ್ಥಪೂರ್ಣವಾಗಿದೆ: ಸ್ಮೃತಿಯಲ್ಲಿ ಚಿರಕಾಲ ಉಳಿಯುವಂತಿದೆ. ಅದರ ಪ್ರಯೋಜನವೂ ವ್ಯಾಪಕವಾಗಿದೆ. ಸೂಕ್ತಮಾಹಿತಿ, ಸೂಕ್ತ ಕ್ರಮದಿಂದಾಗಿ ನಿರ್ಣಯವೂ ಕ್ರಮಬದ್ಧವಾಗಿದೆ; ವಸ್ತುನಿಷ್ಠವಾಗಿದೆ. ನಿರೂಪಣೆಯಲ್ಲಿ ಸರಳತೆ, ಸ್ಪಷ್ಟತೆ, ಸ್ವತಂತ್ರ ಚಿಂತನೆಗಳಿವೆ. ಇಬ್ಬರೂ ಮಾನವತಾವಾದಿಗಳ ಸಾಮ್ಯ-ವೈಷಮ್ಯಗಳ ತೂಕಬದ್ಧ ಹೋಲಿಕೆಯಿಂದ ಕೃತಿಯು ಪರಿಪೂರ್ಣವಾಗಿದೆ. ಹಾಗೆಯೇ, ಮಾನವತಾವಾದ ಹಾಗೂ ಸಮಾಜವಾದಗಳ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದಕ್ಕೆ ದಿಕ್ಸೂಚಿಯಾಗಿದೆ’ ಎಂದಿದೆ.
©2024 Book Brahma Private Limited.