‘ಬೇಂದ್ರೆ ಮತ್ತು ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ’ ಲೇಖಕ ನರಸಿಂಹಮೂರ್ತಿ ಹೂವಿನಹಳ್ಳಿ ಅವರ ತೌಲನಿಕ ಅಧ್ಯಯನದ ಕೃತಿ. ಆಧುನಿಕ ಕನ್ನಡ ಕಾವ್ಯ ಕಂಡ ಶ್ರೇಷ್ಠ ಕವಿಗಳಾದ ದ.ರಾ.ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ದೇಶೀ ಹಾಗೂ ಜನಪದ ಸತ್ವವನ್ನು ಅದ್ಭುತವಾಗಿ ಬಳಸಿಕೊಂಡವರು. ಜನಪದ ಸತ್ವವನ್ನು ತಮ್ಮ ಕಾವ್ಯದಲ್ಲಿ ಅತ್ಯಂತ ಸೃಜನಶೀಲವಾಗಿ ವಿಸ್ತರಿಸಿದ ಈ ಕವಿಗಳು ಕನ್ನಡ ಕಾವ್ಯದ ದಿಗಂತವನ್ನು ವಿಸ್ತರಿಸಿದರು. ದೇಶೀ ಪುರಾಣ ಲೋಕದ ಜೊತೆಗೆ ವಿಶಿಷ್ಟ ಸಂಬಂಧಗಳನ್ನು ಸ್ಥಾಪಿಸಿಕೊಂಡ ಈ ಇಬ್ಬರೂ ಕವಿಗಳಲ್ಲಿ ಪುರಾಣ ಪ್ರಜ್ಞೆ ಕೆಲಸ ಮಾಡಿರುವ ಕ್ರಮವನ್ನು ಈ ಅಧ್ಯಯನವು ಆಳವಾಗಿ ಶೋಧಿಸಲೆತ್ನಿಸಿದೆ.
©2025 Book Brahma Private Limited.