ಶಿವರಾಮ ಕಾರಂತರ ಆಯ್ದ ಪ್ರಮುಖ ಕಾದಂಬರಿಗಳಲ್ಲಿ ಜೀವಂತ ಪಾತ್ರಗಳ ಬಗ್ಗೆ ತೌಲನಿಕವಾಗಿ ಬರೆದ ಲೇಖನಗಳ ಕೃತಿ ಇದು. ಕಾರಂತರು ಸೃಷ್ಟಿಸಿದ ಜೀವಂತ ಪಾತ್ರಗಳಲ್ಲಿ ಎದ್ದು ಕಾಣುವ ಕರಾವಳಿಯ ಕುಟುಂಬ ಮತ್ತು ಸಮಾಜ, ಅದರಲ್ಲೂ, ಬಡ ವರ್ಗಕ್ಕೆ ಸೇರಿದ ಮಲೆಯ ಮಕ್ಕಳ ಜೀವನ ಪರಿ, ಊಳಿಗ ಮಾನ್ಯ ಪದ್ಧತಿ, ಶ್ರೀಮಂತ ವರ್ಗ ಹಾಗೂ ಅವರ ಬಳಕೆಯ ವಸ್ತುವಾಗ ಊಳಿಗ ವರ್ಗ, ಸಾಮಾಜಿಕ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಿಕ್ಕು ನಲುಗಿದ ಮಹಿಳೆಯರು ಇತ್ಯಾದಿ ಕೃತಿಯಲ್ಲಿ ಪರಿಚಯಿಸಲಾಗಿದೆ. ಕಾರಂತರು ಕಂಡ ಒಬ್ಬೊಬ್ಬ ವ್ಯಕ್ತಿಯಲ್ಲೂ ಸಮಾಜವನ್ನು ಪ್ರತಿನಿಧಿಸಬಲ್ಲ. ಕಾಲವನ್ನು ಪ್ರತಿಬಿಂಬಿಸಬಲ್ಲ ಹಾಗೂ ಪ್ರದೇಶವನ್ನು ನಿರ್ದೆಶಿಸಬಲ್ಲ ಗುಣಗಳನ್ನು ಕಾಣುತ್ತೇವೆ. ಈ ಎಲ್ಲವುಗಳನ್ನು ಲೇಖಕರು ಗಂಭೀರವಾಗಿ ಪರಿಗಣಿಸಿ ಬರೆಹಕ್ಕಿಳಿಸಿದ್ದಾರೆ.
©2025 Book Brahma Private Limited.