ಕರುನಾಡು

Author : ಮನು ವಿ. ದೇವದೇವನ್

Pages 130

₹ 189.00




Year of Publication: 2024
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು, ಹೊನ್ನೇಸರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417.
Phone: 08183 - 295645 / 9480280401

Synopsys

`ಕರುನಾಡು’ ಮನು ವಿ ದೇವದೇವನ್ ಅವರ ಕರ್ನಾಟಕ ಇತಿಹಾಸ ಕುರಿತ ಬರಹಗಳಾಗಿವೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಕರ್ನಾಟಕದ ಇತಿಹಾಸ ಕುರಿತ ಈ ಲೇಖನ ಸಂಗ್ರಹದೊಳಗೆ ಐದು ವಿಭಿನ್ನ ಬರಹಗಳಿವೆ. ಮೊದಲನೆಯದು ಪಂಪ ಮತ್ತು ವಚನಗಳ ನಡುವಿನ ಕಾಲಧರ್ಮದ ಮತ್ತು ಕಾವ್ಯಧರ್ಮದ ವೈಷಮ್ಯಗಳನ್ನು ಕುರಿತ ತಾತ್ವಿಕ ಜಿಜ್ಞಾಸೆ. ಇದು ಕನ್ನಡ ಸಾಹಿತ್ಯದ ಚರ್ಚೆಗೊಂದು ಹೊಸ ಸೇರ್ಪಡೆ. ಎರಡನೆಯ ಲೇಖನವು, ಈಗಿನ ಅಭಿಪ್ರಾಯಗಳು ಸೂಚಿಸುವಂತೆ, ವಚನ ಸಾಹಿತ್ಯವು ನಿಜವಾಗಿಯೂ ಛಂದಸ್ಸಿನಿಂದ ಮುಕ್ತವಾದ ರಚನೆಗಳು ಎಂಬ ಸ್ಥಾಪಿತ ನಂಬಿಕೆಯನ್ನು ಸಾಧಾರವಾಗಿ ಪ್ರಶ್ನಿಸುವಂಥದು. ಮೂರನೆಯ ಲೇಖನ ಕರ್ನಾಟಕದ ಇತಿಹಾಸದೊಳಗೆ ಧಾರ್ಮಿಕ ಸಂರಚನೆಗಳೂ ದೇವಾಲಯಗಳೂ ಬೆಳೆದುಬಂದ ಕಾಲವನ್ನು ಕುರಿತದ್ದಾಗಿದ್ದರೆ, ನಾಲ್ಕನೆಯ ಲೇಖನ ಇನ್ನೂ ಪ್ರಾಚೀನ ಕಾಲಕ್ಕೆ ಹೋಗಿ ಆಗಿನ ನೀರಾವರಿ ಮತ್ತು ಭೌಗೋಲಿಕ ಎಲ್ಲೆಗಳ ಸಂಬಂಧವನ್ನು ಪರಿಶೀಲಿಸುತ್ತದೆ. ಕಡೆಯ ಲೇಖನದೊಳಗೆ 12ನೆಯ ಶತಮಾನದಲ್ಲಿ ಮಂಗಳೂರಿನಲ್ಲಿ ವಾಸಿಸಿದ್ದ ಒಬ್ಬ ಯಹೂದಿ ವ್ಯಾಪಾರಿಯನ್ನು ಕುರಿತ ಒಂದು ಸ್ವಾರಸ್ಯದ ಚಿತ್ರವಿದೆ. ಇವೆಲ್ಲವೂ ಬಿಡಿ ಲೇಖನಗಳೇ ಆದರೂ ಕನ್ನಡ ನಾಡಿನ ಇತಿಹಾಸವನ್ನು ಹೊಸ ಕಣ್ಣುಗಳಿಂದ ಹುಡುಕುವ, ಹೊಸ ಪುರಾವೆಗಳಿಂದ ಗ್ರಹೀತ ಸತ್ಯಗಳನ್ನು ಪ್ರಶ್ನಿಸುವ ವಿಭಿನ್ನ ಆಲೋಚನಾ ಪ್ರಸ್ಥಾನವೊಂದಕ್ಕೆ ನಮ್ಮನ್ನು ಕರೆದೊಯ್ಯುವಂತಿವೆ.

About the Author

ಮನು ವಿ. ದೇವದೇವನ್

ಮನು ದೇವದೇವನ್‌ ಅವರು ಮಂಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ಮನು ದೇವದೇವನ್‌ ಅವರು ದಕ್ಷಿಣ ಭಾರತದ ಆಧುನಿಕ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ಅನನ್ಯ ಹಾಗೂ ವ್ಯಾಪಕ ಕೊಡುಗೆ ನೀಡಿದ್ದಾರೆ. ಅವರ ’A Pre-History of Hinduism’ ಕೃತಿಯು ಭಾರತದ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಕ್ಷೇತದಲ್ಲಿ ವಿಭಿನ್ನ ನೋಟ ಹಾಗೂ ಆಲೋಚನಾ ಕ್ರಮದಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ಭಾಷೆಗಳ ಆಕರಗಳನ್ನು ಬಳಸಿ ತಮ್ಮ ಅಪೂರ್ವ ಒಳನೋಟವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಅವರು ಪರಿಚಿತರಾಗಿದ್ದಾರೆ. ಪೃಥ್ವಿಯಲ್ಲೊದಗಿದ ಘಟವು…ಅವರ ...

READ MORE

Related Books