ಲೇಖಕ ಡಾ. ಕೆ. ಕೇಶವ ಶರ್ಮ ಅವರ ಕೃತಿ-ಸಾಹಿತ್ಯ ಮತ್ತು ತತ್ವಜ್ಞಾನ. ಎಲ್ಲ ಜ್ಞಾನಶಾಖೆಗಳಿಗೆ ತತ್ವಶಾಸ್ತ್ರವೇ ಮೂಲ. ತತ್ವಶಾಸ್ತ್ರದ ವಿಷಯ ವಸ್ತು ತತ್ವಜ್ಞಾನ. ಸಾಹಿತ್ಯವು ಸಹ ತತ್ವಜ್ಞಾನದ ಪ್ರಮುಖ ಭಾಗವೆ. ತತ್ವಜ್ಞಾನವು ಬದುಕಿನ ವಾಸ್ತವತೆ, ಬದುಕಿನ ವಿಧಾನ, ಮೌಲ್ಯಗಳನ್ನು, ಬದುಕಿನ ಸಾರ್ಥಕತೆ, ಅದರ ಸಿದ್ಧಿ ಇತ್ಯಾದಿ ಕುರಿತು ಚರ್ಚಿಸುತ್ತದೆ. ಆದರೆ, ಸಾಹಿತ್ಯವು ಬದುಕಿನ ರಂಜನೆಯೂ, ಸಂದೇಶವಾಗಿಯೂ, ಸಾಮಾಜಿಕ ವಿದ್ಯಮಾನಗಳ ಬಿಂಬವೂ ಆಗುತ್ತದೆ. ಇಂತಹ ಚಿಂತನೆಯ ಎಳೆಗಳ ಮೂಲಕ ಚರ್ಚಿಸಿರುವ ಬರಹಗಳನ್ನು ಈ ಕೃತಿ ಒಳಗೊಂಡಿದೆ. ಸಾಹಿತ್ಯ ಹಾಗೂ ತತ್ವಜ್ಞಾನದ ಸಾಮಿಪ್ಯ, ವಿರೋಧಾಭಾಸಗಳನ್ನು ಸ್ಪಷ್ಟಪಡಿಸಿದೆ. ತೌಲನಿಕ ಅಧ್ಯಯನವು ಈ ಕೃತಿಯ ವಿಷಯ ವಸ್ತು.
©2025 Book Brahma Private Limited.