ಭಾರತೀಯ ಸಂಸ್ಥಾಪಕರೂ, ಬರಹಗಾರರೂ ಆದ ಎಚ್.ವೈ ರಾಜಗೋಪಾಲ್ ಅವರ ಕೃತಿ ’ ಸೃಷ್ಟಿ ನಾಲ್ಕು ಜಗತ್ತುಗಳು’.
ಈ ಕೃತಿಯು ಉತ್ತರ ಅಮೆರಿಕದ ಇಂಡಿಯನ್ನರ ಪುರಾಣ ಮತ್ತು ಜಾನಪದ ಕತೆಗಳನ್ನು ಕುರಿತು ಪ್ರಸ್ತಾಪಿಸುತ್ತದೆ. ಯಾವುದೋ ಒಂದು ಪುರಾಣವನ್ನು ಗ್ರಹಿಸುತ್ತಾ ಗಮನಿಸುತ್ತಾ ಅನುವಾದಿಸುತ್ತಾ ಅದರ ಪೂರ್ವ ರೂಪದಲ್ಲೇ ಪುರಾಣವನ್ನು ಉಳಿಸಿಕೊಳ್ಳಬೇಕೆನ್ನುವ ಛಲ ಲೇಖಕರು ಬರೆಯುವ ಗದ್ಯದ ಕ್ರಮದಲ್ಲಿದೆ.
ಉತ್ತರ ಅಮೆರಿಕದ ಇಂಡಿಯನ್ನರ ಪುರಾಣಗಳನ್ನು ಕೌಶಲ್ಯ ಮತ್ತು ಸೌಂದರ್ಯದ ದೃಷ್ಟಿಯಿಂದ ಮಾತ್ರ ನೋಡುವುದಲ್ಲದೆ ವೇದಕಾಲದ ಜನರಂತೆಯೇ ಈ ಇಂಡಿಯನ್ನರೂ ನಮ್ಮ ಪುರಾತನರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಜನಾಂಗಗಳ ನಡುವಿನ ದ್ವೇಷ, ಅಸೂಯೆ, ಕೊಡುಕೊಳ್ಳುವ ವ್ಯವಹಾರದಲ್ಲಿರುವ ಲೋಭ, ಬಡ ಜನರನ್ನು ಗೆಲ್ಲುವ ತಂತ್ರಗಾರಿಕೆ ಎಲ್ಲವನ್ನೂ ಈ ಕೃತಿ ಸೂಕ್ಷ್ಮವಾಗಿ ತೆರೆದಿಟ್ಟಿದೆ.
ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಡಾ. ಯು. ಆರ್ . ಅನಂತಮೂರ್ತಿ ಅವರು ’ಮನುಷ್ಯ ತನ್ನಲ್ಲಿರುವ ದೈವಿಕತೆಯನ್ನು ಮತ್ತೆ ಪಡೆಯಬೇಕಾದರೆ ಅವನು ಹೋಗಬೇಕಾದ್ದು ಪರಮಾಣು ತಂತ್ರ ಸೃಷ್ಟಿಸುವ ಹೊಸ ಲೋಕಕ್ಕಲ್ಲ; ಕಾಡೆಮ್ಮೆಗಳ ಜೊತೆ ತಂಪಾಗಿ ಬಾಳುತ್ತಿದ್ದ ಪುರಾತನ ಕಾಲಕ್ಕೆ ಎಂದು ನಮ್ಮನ್ನು ಆಲೋಚಿಸುವಂತೆ ಮಾಡಬಲ್ಲ ಕಥೆಗಳು ಇಲ್ಲಿವೆ.’ ಎಂದಿದ್ದಾರೆ.
©2025 Book Brahma Private Limited.