ಲೇಖಕರಾದ ಡಾ. ಬಿ.ಎಸ್. ರುಕ್ಕಮ್ಮ ಹಾಗೂ ಎಸ್.ಆರ್. ರಂಗಮಣಿ ಅವರು ಜಂಟಿಯಾಗಿ ಸಂಪಾದಿತ ಕೃತಿ -ಅಧಿಕಾರದ ಕುರುಡು. ಕಿರಿಯರ ಕಥಾಮಾಲೆಯಡಿ ಮಧ್ಯಕಾಲೀನ ಭಾರತದ ಜನಪದ ಕಥೆಗಳನ್ನು ಸಂಗ್ರಹಿಸಿದ್ದನ್ನು ಪ್ರಕಟಿಸಲಾಗಿದೆ. ವಿನೋದ ಕಥೆಗಳು, ಜಾಣ ಕಥೆಗಳು, ನೀತಿ ಕಥೆಗಳು, ಪ್ರಾಣಿ ಪಕ್ಷಿಗಳ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು, ಹೀಗೆ ಮಕ್ಕಳ ಓದಿನ ಆಸಕ್ತಿಗೆ ಪೋಷಕ-ಪೂರಕವಾಗಿವಂತೆ ಕಥೆಗಳನ್ನು ಪ್ರಕಟಿಸುವ ಭಾಗವಾಗಿ ಇಲ್ಲಿಯ ಕಥೆಗಳನ್ನು ಸಂಪಾದಿಸಿದ್ದು, ಎಲ್ಲ ಕಥೆಗಳು ಸರಳ ಶೈಲಿಯಲ್ಲಿವೆ. ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ದೊಡ್ಡವರೂ ಸಹ ಓದಬಹುದಾದ ಕಥೆಗಳಿವು.
©2024 Book Brahma Private Limited.