‘ಬಿಜಿನೆಸ್ ಮ್ಯಾನೇಜ್ಮೆಂಟ್ ಜನಪದ ಕತೆಗಳು’ ಲೇಖಕ ಡಾ. ಟಿ. ಗೋವಿಂದರಾಜು ಅವರು ಸಂಗ್ರಹಿಸಿರುವ ಜನಪದ ಕತೆಗಳ ಸಂಕಲನ. ಮೂಲತಃ ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಚನ್ನಾದೇವಿ ಅಗ್ರಹಾರದವರು. ತಮ್ಮ ಊರಿನವರಿಂದ ಕತೆಗಳನ್ನು ಸಂಗ್ರಹಿಸಿದ್ದು, ಕೆಲವು ಕತೆಗಳು ವಡ್ಡಾರಾಧನೆಯಷ್ಟು ಪ್ರಾಚೀನವಾದವು ಎನ್ನುತ್ತಾರೆ ಲೇಖಕರು.
ಇಲ್ಲಿ ಸೇರಿರುವ ಮುತ್ತಿನತೆನೆ ಕತೆಯಲ್ಲಿ ಅದ್ಭುತವಾಗಿ ನಿರೂಪಿತವಾಗಿರುವ ಕಳ್ಳನನ್ನು ಹಿಡಿಯ ಹೋದ ತಳವಾರನನ್ನೇ ಲಾಕಪ್ಪಿನಲ್ಲಿ ಸಿಕ್ಕಿಸುವ ಪರಿಕಲ್ಪನೆ ವಡ್ಡಾರಾಧನೆಯ ವಿಧ್ಯುತ್ಚೋರನೆಂಬ ರಿಸಿಯಕತೆಯಲ್ಲೇ ದಾಖಲಾಗಿದೆ. ಜನ್ನನ ಯಶೋಧರ ಚರಿತೆಯ ಅಮೃತಮತಿ ಮತ್ತು ಕುಷ್ಟರೋಗಿಯು ಇಲ್ಲಿನ ಕತೆಯ ಕತೆಯಲ್ಲಿ ಜೀವಪಡೆದಿದ್ದಾರೆ. ಹಾಗೆಯೇ, ಜೈನ ಪುರಾಣ, ಬೌದ್ಧ ಸಾಹಿತ್ಯ, ಬೇತಾಳ ಪಂಚವಿಂಶತಿ, ದೇವಚಂದ್ರನ ರಾಜಾವಳಿ ಕತೆ ಮೊದಲಾದವು ನಮ್ಮ ಗ್ರಾಮೀಣರು ಮೌಖಿಕ ನಿರೂಪಣೆಗಳಲ್ಲಿ ಈಗಲೂ ಕಾಪಿಟ್ಟುಕೊಂಡು ಬಂದಿರುವ ಕಥಾ ಎಳೆಗಳು ಲಭ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.