ಲೇಖಕ ಎಚ್. ಎಸ್. ಮಂಜುನಾಥ ಅವರ ಕೃತಿ ʻಸಂತಾಲರ ಜಾನಪದ ಕಥೆಗಳುʼ. ಜಾನಪದ ಕಥೆಗಳು ಒಂದು ಪ್ರದೇಶದ ಜನಜೀವನ, ಅವರ ರೂಢಿ, ಆಚಾರ-ವಿಚಾರಗಳನ್ನು, ಅವರ ಬದುಕು-ಬವಣೆ, ಸಾಹಸ ಜೀವನವನ್ನು, ಕೆಲವೊಮ್ಮೆ ಕದನದಲ್ಲಿ ಅವರು ತೋರುವ ಸಾಹಸವನ್ನು ಮನರಂಜಿಸುವಂತೆ ಹೇಳುವಂಥವು. ಬಾಯಿಂದ ಬಾಯಿಗೆ ಹರಡುವ ಈ ಕಥೆಗಳು ಒಂದು ಪ್ರದೇಶದ, ಪ್ರಾಂತದ ಎಲ್ಲೆಯನ್ನು ದಾಟಿ ಮತ್ತೊಂದು ಪ್ರದೇಶದ್ದೇ ಕಥೆಯಾಗುವುದೂ ಉಂಟು. ಪ್ರಸ್ತುತ ಸಂತಾಲರ ಜಾನಪದ ಕಥೆಗಳು ಅ ಪ್ರದೇಶದ ವೈಶಿಷ್ಟ್ಯವನ್ನು ಎತ್ತಿ ಹೇಳುತ್ತದೆ. ಆ ಜನಪದರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುತ್ತದೆ.
©2024 Book Brahma Private Limited.