ನಾಮಧಾರಿಗಳ ಆಡುಭಾಷೆಯ ಕಥೆಗಳು

Author : ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

Pages 112

₹ 0.00




Year of Publication: 2020
Published by: ಮಿತ್ರ ಮಾಧ್ಯಮ
Address: ಬೆಂಗಳೂರು

Synopsys

‘ನಾಮಧಾರಿಗಳ ಆಡುಭಾಷೆಯ ಕಥೆಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ವಿವಿಧ ವಿಷಯಗಳ ವಿಂಗಡಣೆ, ಸಂಸ್ಕರಣೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರ ಸಂಗ್ರಹಗಳೂ ಅವರ ಜೊತೆಯೇ ಆಧುನಿಕತೆಯ ಜೀವನಶೈಲಿಯಲ್ಲಿ ಅಡಗಿಹೋಗಿದೆ. ಈಗಿನ ತಲೆಮಾರಿನವರ ಹತ್ತಿರ ಸ್ವಲ್ಪವೂ ಸಿಗುವ ಆಸೆಯಿಲ್ಲ. ಮಾಡಿದ ಸಂಗ್ರಹವನ್ನು ಅವಲೋಕಿಸಿದಾಗ ಜನಪದರ ಮುಗ್ಧ ಮನಸ್ಸು, ಸ್ವಚ್ಛಂದ ವಾತಾವರಣ, ಆಗಿನ ಸಾಮಾಜಿಕ ರೀತಿ-ನೀತಿಗಳ ಕಲ್ಪನೆ, ಜೀವನದ ಸರಳತೆ, ಸರಳ-ಸುಲಭ ಚಿಕಿತ್ಸಾಪದ್ಧತಿ ಎಲ್ಲವೂ ಈ ಕೃತಿಯ ಮುಖೇನ ತಿಳಿಯಹತ್ತಿದೆ.

About the Author

ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ...

READ MORE

Related Books