‘ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಇಲ್ಲಿನ ಪಾಂಡಿತ್ಯಪೂರ್ಣ ಪೀಠಿಕೆಗಳು, ಮುನ್ನುಡಿಗಳು ಜಾನಪದ ಕ್ಷೇತ್ರದಲ್ಲಿ ಅವರ ಅಳವಾದ ಅಧ್ಯಯನವನ್ನು ಎತ್ತಿ ತೋರಿಸುತ್ತವೆ. ತುಲನಾತ್ಮಕ ವಿಶ್ಲೇಷಣೆಗಳು ನಿಜವಾಗಿಯೂ ಶ್ಲಾಘನೀಯ. ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಕುರಿತ ಅಧ್ಯಯನಗಳು ಅನನ್ಯವಾಗಿದೆ. ಸಂಶೋಧನಾ ಪ್ರಬಂಧಗಳು, ಭಾಷಣಗಳು, ಜಾನಪದ ಲೇಖನಗಳು ಉಲ್ಲೇಖನೀಯ. ಜಾನಪದ ಅಧ್ಯಯನದ ಜೊತೆಗೆ ಹೋಮಿಯೋಪಥಿ, ಆಯುರ್ವೇದ, ಹಳ್ಳಿಯ ಚಿಕಿತ್ಸಾ ಪದ್ಧತಿಗಳಲ್ಲಿಯೂ ಕೂಡ ಅಪಾರ ಜ್ಞಾನ ಮತ್ತು ಅನುಭವಗಳನ್ನು ಪಡೆದುಕೊಂಡಿದ್ದರು. ಸಾವಿರಾರು ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಎಂಬುವುದನ್ನು ಈ ಕೃತಿಯ ಮೂಲಕ ತಿಳಿಯಬಹುದು.
©2024 Book Brahma Private Limited.