‘ಜನಪದ ಒಗಟು’ ಜಾನಪದ ತಜ್ಞ ಡಾ. ಕುರುವ ಬಸವರಾಜ್ ಅವರ ಕಥಾಸಂಕಲನ.1989ರಲ್ಲಿ ಪ್ರಥಮ ಮುದ್ರಣಕಂಡ ಈ ಕೃತಿ 1992ರಲ್ಲಿ ಎರಡನೇ ಮುದ್ರಣ ಹಾಗೂ 2017ರಲ್ಲಿ ಮೂರನೆ ಮುದ್ರಣಕಂಡಿದೆ. ಈ ಸಂಕಲನಕ್ಕೆ ಡಾ. ಹಾ.ಮಾ. ನಾಯಕ್,ಡಾ.ಸಿ.ಪಿ.ಕೆ, ಎಚ್.ಎಲ್. ನಾಗೇಗೌಡರ ಬೆನ್ನುಡಿಗಳಿವೆ. ಕೃತಿಯ ಕುರಿತು ಬರೆಯುತ್ತಾ ‘ಕುರುವ ಬಸವರಾಜ್ ಅವರ ಒಗಟಿನ ಕಥೆಗಳು ಉಳಿದಿರುವುದನ್ನು ಕೂಡಿ ಹಾಕುವ ಪ್ರಯತ್ನ, ಅವು ಒಮ್ಮೆ ಓದಲು ಹಿಡಿದರೆ ಮುಗಿಸುವವರೆಗೂ ಬಿಡದಷ್ಟು ಆಕರ್ಷಕವಾಗಿವೆ. ಮೇಲೆ ಹೇಳಿದಂತೆ ಸಾಮಾನ್ಯ ಜನರೇ ಒಗಟುಗಳನ್ನು ಒಡ್ಡುವುದು, ಬಿಡಿಸುವುದೂ ಅವರೇ ಆ ಜಾಣ್ಮೆ, ಚತುರತೆ ಅನಕ್ಷರಸ್ಥ ಹಳ್ಳಿಗರಲ್ಲದೆ ಮತ್ಯಾರಿಗೆ ಬರಬೇಕು ಅಕ್ಷರಸ್ಥರಿಗೆ ಪುಸ್ತಕ, ಅನಕ್ಷರಸ್ಥರಿಗೆ ಮಸ್ತಕ, ಈ ಮಸ್ತಕದ ಕುಲುಮೆಯಿಂದ ಹಾರಿದ ಪ್ರತಿಭೆಯ ಕಿಡಿಗಳು ಈ ಒಗಟು ಕಥೆಗಳು’ ಎಂದಿದ್ದಾರೆ ಎಚ್.ಎಲ್. ನಾಗೇಗೌಡ.
©2024 Book Brahma Private Limited.