‘ಡಜನ್ನಿಗೆ ಹದಿಮೂರು’ ಕೃತಿಯು ಎಂ.ಎಸ್.ಎಸ್. ಮೂರ್ತಿ ಅವರ ವಿವಿಧ ದೇಶಗಳ ಅನುವಾದಿತ ಜನಪದ ಕತೆಗಳಾಗಿವೆ. ಇಂಗ್ಲೆಡ್, ಕೊರಿಯಾ, ಸ್ಕಾಟ್ಲೆಂಡ್, ಚೀನಾ, ರಷ್ಯಾ, ಐರ್ಲೆಂಡ್, ಸರ್ಬಿಯಾ ಮುಂತಾದ 22 ದೇಶಗಳ 36 ಜಾನಪದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದಿರುವ ಕ್ಯಾತನಹಳ್ಳಿ ರಾಮಣ್ಣ ಅವರು, ಯಾವುದೇ ದೇಶದ ಯಾವ ಭಾಷೆಯ ಕೃತಿಯಾದರೂ ನಮಗೆ ಗೊತ್ತಿರುವ ಭಾಷೆಯ ಮೂಲಕವೇ ನಮ್ಮ ಮಾತೃಭಾಷೆಗೆ ತಂದುಕೊಳ್ಳಬೇಕಾಗುತ್ತದೆ. ಇದೊಂದು ಜಾಗತಿಕ ಸತ್ಯವಾಗಿದೆ. ಈ ಸತ್ಯವು ಮೂರ್ತಿ ಅವರ ಪ್ರಸ್ತುತ ಸಂಕಲನಕ್ಕೂ ಅನ್ವಯಿಸುತ್ತದೆ. ಭಾಷಾಂತರದ ಹಲವು ಮಜಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಾಗ ಮಾತ್ರ ಅನುವಾದ ಸಾಹಿತ್ಯ ಕೂಡಾ ಪರಿಣಾಮಕಾರಿಯಾಗುತ್ತದೆ. ಅಂಥ ಒಂದು ಪರಿಣಾಮಕಾರಿ ಫಲಿತಾಂಶವನ್ನು ಈ ಸಂಕಲನದಲ್ಲಿ ಕಾಣಬಹುದು. ಒಬ್ಬ ವಿಜ್ಞಾನಿಯಾಗಿ, ವಿಜ್ಞಾನ ಲೇಖಕರಾಗಿ, ಪ್ರಸಿದ್ದರಾಗಿರುವ ಎಂ.ಎಸ್.ಎಸ್.ಮೂರ್ತಿ ಅವರು ತಮ್ಮ ಬಿಡುವಿನ ವೇಳೆಗಳಲ್ಲಿ ಮನಸ್ಸನ್ನು ಹಗುರಗೊಳಿಸಿಕೊಳ್ಳಲೋ ಏನೋ ಓದುತ್ತಿದ್ದ ಬೇರೆ ಬೇರೆ ದೇಶಗಳ ಜನಪದ ಕತೆಗಳಿಂದ ಆಕರ್ಷಿತರಾಗಿ ಅವನ್ನು ಆಗಾಗ ಕನ್ನಡಕ್ಕೆ ಅನುವಾದಿಸುತ್ತಾ ಬಂದುದರ ಫಲವೇ ಈ ಸಂಕಲನವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾ ಎಮ್ಎಸ್ಎಸ್ ಮೂರ್ತಿ ಅವರ ಡಜ್ಜನಿಗೆ ಹದಿಮೂರು ಪುಸ್ತಕ ಪರಿಚಯ.
©2025 Book Brahma Private Limited.