ಮೂಲತಃ ಮಂಗಳೂರಿನವರು ಸೂರ್ಯ ನಾರಾಯಣ ಪಂಜಾಜೆ (ಎಸ್.ಎನ್.ಪಂಜಾಜೆ). ಯಕ್ಷಗಾನ ಕ್ಷೇತ್ರದಲ್ಲಿ 40 ವರುಷಗಳ ವಿಶೇಷ ಅನುಭವ ಇವರದ್ದು. ಯಕ್ಷಗಾನ ಕಲಾವಿದನಾಗಿ ಕೌರವ, ಭೀಮ, ಶೂರ್ಪನಖಿ, ಜಮದಗ್ನಿ, ದುಷ್ಟಬುದ್ಧಿ, ಮುಂತಾದ ಪಾತ್ರಗಳ ಅಭಿನಯದ ಮೂಲಕ ಗಮನಸೆಳೆದಿದ್ದಾರೆ. ರಂಗಭೂಮಿಯಲ್ಲೂ ತೊಡಗಿಸಿಕೊಂಡಿರುವ ಇವರು ವಿವಿಧ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಯಕ್ಷಗಾನದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನದ ನೇತೃತ್ವವಹಿಸಿದ್ದಾರೆ. ಕೇರಳ ರಾಜ್ಯಮಟ್ಟದ ಪ್ರಶಸ್ತಿ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಚಿಟ್ಟಾಣಿ ಪ್ರಶಸ್ತಿ, ಕಲಾ ಕೌಮುದಿ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಇಡುಗುಂಜಿಯಲ್ಲಿ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.