ಜಾನಪದ ತಜ್ಞ ಶ್ರೀ ರಾಮ ಇಟ್ಟಣ್ಣವರ ಅವರ ಕೃತಿ-’ಬಯಲಾಟ ಲೇಖನಗಳು’ . ಬಯಲಾಟಕ್ಕೆ ಸಂಬಂಧಿಸಿದ ಒಟ್ಟು 12 ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಬೆಳಗಾವಿಯಲ್ಲಿ ಏರ್ಪಟ್ಟ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾಡಿದ ಸರ್ವಾಧ್ಯಕ್ಷ ಭಾಷಣದ ಪಠ್ಯವನ್ನೂ ಇಲ್ಲಿ ನೀಡಲಾಗಿದೆ. ಬಯಲಾಟಕ್ಕೆ ಪೂರಕವಾಗಿರುವ ರಂಗಪರಿಕರ, ಪ್ರಸಾಧನ ಕುರಿತಾಗಿ ಕೆಲವು ಲೇಖನಗಳಿವೆ. ಕೆಲವೊಂದು ಲೇಖನಗಳು ಬಯಲಾಟದ ಪರಿಷ್ಕರಣೆ ಹಾಗೂ ಮರುಹುಟ್ಟಿನ ಬಗೆಯನ್ನು ವಿಶ್ಲೇಷಿಸುತ್ತವೆ.
©2025 Book Brahma Private Limited.