’ಭದ್ರಕಾಳಿ ವಿವಾಹ’ ಅಥವಾ ’ವೀರಭದ್ರ ಕಲ್ಯಾಣ’ ಕೃತಿಯು ಪ್ರಾದೇಶಿಕ ಭಾಷೆ. ಸಾಹಿತ್ಯ ಹಾಗೂ ಸಂವೇದನೆ ದೃಷ್ಟಿಯಿಂದ ಮಹತ್ವದ್ದು. ಶಿಷ್ಟ ಕಾವ್ಯಗಳ ರಚನೆ ಹಾಗೂ ಅವುಗಳ ಚರ್ಚೆಯ ಭರಾಟೆಯಲ್ಲಿ ಪ್ರಾದೇಶಿಕವಾದ ಇಂತಹ ರಚನೆಗಳು ಅಲಕ್ಷ್ಯಕ್ಕೆ ಒಳಗಾಗಿವೆ. ಕೃತಿಯ ಕರ್ತೃ ವಿರೂಪಣ್ಣ, ಕವಿ ಹರಿಹರನಿಂದ ಪ್ರೇರಣೆ ಪಡೆದಿದ್ದರೂ, ತನ್ನ ಕಾಲದ ಸೂಕ್ಷ್ಮ ಸಂವೇದನೆಯನ್ನು ಕಾವ್ಯವಾಗಿಸಿದ್ದಾನೆ. ವಸ್ತು, ರಚನೆ, ವಸ್ತು, ಕಥನ, ಶೈಲಿ ದೃಷ್ಟಿಯಿಂದ ಈ ಕೃತಿಯು ವಿಶಿಷ್ಟತೆ ಪಡೆದಿದೆ. ಗಿರಿಜಾ ಕಲ್ಯಾಣ ಕೃತಿಯಲ್ಲಿ ಶಿವ ಹಾಗೂ ವೀರಭದ್ರ ಅವರು ಗಿರಿಜೆಯ ಸಾವಿಗೆ ಉತ್ತರ ನೀಡಿದ್ದರೆ, ಭದ್ರಕಾಳಿ ಹಾಗೂ ವೀರಭದ್ರರ ಮೂಲಕ ವಿರೂಪಣ್ಣ ಕವಿಯು ಪ್ರತ್ಯುತ್ತರ ನೀಡುತ್ತಾನೆ. ಸ್ಥಳೀಯ ಸಾಂಸ್ಕೃತಿಕ ಅನನ್ಯತೆಯ ದೃಷ್ಟಿಯಿಂದ ಈ ಕೃತಿ ಮಹತ್ವದ್ದು.
©2024 Book Brahma Private Limited.