ಪ್ರೊ. ನಟರಾಜ ಬೂದಾಳು ಅವರು ಸಂಪಾದಿಸಿದ ಕೃತಿ-ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ-2. ತುರುವನೂರು ಕವಿ ಲಿಂಗಯ್ಯ ಅವರ ಬದುಕು ಬರಹ ಅರ್ಥಪೂರ್ಣ. ಕಥೆ, ನಾಟಕ, ಗೀತೆ, ಷಟ್ಪದಿ, ರಗಳೆ, ತ್ರಿಪದಿ ತತ್ವಪದಗಳನ್ನು ಬರೆದ ಆಧ್ಯಾತ್ಮಕ ಚಿಂತಕರಾಗಿದ್ದರು. ಚಿತ್ರದುರ್ಗದ ನೆಲದಲ್ಲಿದ್ದರೂ ಅಜ್ಞಾನ ಕವಿಗಳಂತೆ ಬದುಕು ನೂಕಿದವರು. ಕರ್ಮಯೋಗ ಹಾಗೂ ಜ್ಞಾನ ಯೋಗದ ಮಹತ್ವ ಸಾರುವ ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ಬದುಕಿನಲ್ಲಿ ಕಷ್ಟಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ. ನಮ್ಮೊಳಗಿನ ಬ್ರಹ್ಮನನ್ನು ನಂಬಬೇಕು. ಆಗಲೇ ಈ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಸಂದೇಶ ಅವರದ್ದು. ಸುಮಾರು 800ಕ್ಕೂ ಅಧಿಕ ತತ್ವಗಳನ್ನು ರಚಿಸಿದ್ದು, ಆ ಪೈಕಿ, ಈ ಕೃತಿಯು ಭಾಗ-2 ಎಂದು ಗುರುತಿಸಲಾಗಿದೆ.
©2024 Book Brahma Private Limited.