ಕೊಡೇಕಲ್ಲು ಬಸವಣ್ಣನವರ ತತ್ವಪದಗಳು-ಕೃತಿ ಸಂಪಾದಕರು-ಬಸವಲಿಂಗ ಸೊಪ್ಪಿಮಠ. ಕಾಲಜ್ಞಾನವನ್ನು ಹೇಳುವವರೆಂದೇ ಖ್ಯಾತಿಯ ಕೊಡೇಕಲ್ಲ ಬಸವಣ್ಣ ಮೂಲತಃ ಹಂಪಿಯವರು. ಮಲ್ಲಿಶೆಟ್ಟಿ -ಲಿಂಗಾಜೆಮ್ಮ ಕಂಪತಿ ಮಗ. ಇವರ ಕಾಲ ಸರಿಸುಮಾರು ಕ್ರಿ.ಶ. 1489. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್ಲು ಗ್ರಾಮದಲ್ಲಿ ನೆಲೆ ನಿಂತ ಸಂತ-ಶರಣ. ಈ ಗ್ರಾಮವು ಕೃಷ್ಣಾ ನದಿಯ ತಟದಲ್ಲಿದೆ. ತುರುಗಾಯಿ ರಾಮಣ್ಣನ ವಚನ ಆಧಾರದನ್ವಯ ಕಲ್ಯಾಣ ಬಿಟ್ಟು ಸಂಗಮಕ್ಕೆ ಬರುವಾಗ ಕೊಡೇಕಲ್ಲು ಗ್ರಾಮದಲ್ಲಿ ಕೊಡೇಕಲ್ಲು ಬಸವಣ್ಣ ತಂಗಿದ್ದ ಎಂದು ತಿಳಿದು ಬರುತ್ತದೆ.
ಅದ್ವೈತ ಸಂಗಮೇಶ್ವರ ಎಂಬಾತ ಕೊಡೇಕಲ್ಲು ಬಸವಣ್ಣನನ್ನು ಅಧ್ಯಾತ್ಮಿಕವಾಗಿ ಸೆಳೆದಿದ್ದ ಎಂದು ಹೇಳಲಾಗುತ್ತಿದೆ. ಇಷ್ಟಲಿಂಗ ಬಿಡಿಸಿ ಚರ್ಮಾಂಬರ ಉಡಿಸಿ ಕೈಯಲ್ಲಿ ಕೋಲು ,ಕಾಲಲ್ಲಿ ಕಂಸ, ‘ಹಂಡಿ’ ಎಂಬ ಮಣ್ಣಿನ ಭಿಕ್ಷಾ ಪಾತ್ರೆ ನೀಡಿ ಅದ್ವೈತದ ನುಡಿ ಸಾರಲು ಹೇಳಿದ ಎಂಬ ಐತಿಹ್ಯವೂ ಇದೆ. ಮೊದಲ ಪತ್ನಿ ಕಾಶಮ್ಮ ತೀರಿಕೊಂಡಾಗ ಬಳ್ಳಿಗಾವೆಯ ಪಂಪವೆಣ್ಣಿಗೆ ಮಠದ ಸಿದ್ಧಯ್ಯ -ಚೆನ್ನಮ್ಮರ ಮಗಳು ನೀಲಮ್ಮ ( ಮಹಾದೇವಮ್ಮ ) ನನ್ನು ಮದುವೆಯಾಗಿ, ಮಕ್ಕಳು ರಾಚಪ್ಪಯ್ಯ, ಸಂಗಪ್ಪಯ್ಯ ಹಾಗೂ ಗುಹೇಶ್ವರ ಸಹಿತಿ ಕಾಲಜ್ಞಾನ ಸಾರುತ್ತಾ ಬದುಕು ಕಳೆಯುತ್ತಿದ್ದರು. ಇವರ ಕಾಲಜ್ಞಾನ ಸಾಹಿತ್ಯವನ್ನು ‘ಅಮರಗನ್ನಡ’ ಎಂಬ ಸಾಂಕೇತಿಕ ಲಿಪಿಯಲ್ಲಿದೆ. ಕೊಡೇಕಲ್ಲು ಬಸವಣ್ಣನವರ ತತ್ವಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
©2024 Book Brahma Private Limited.