ಲೇಖಕ ಎಚ್. ಕಾಶೀನಾಥ ರೆಡ್ಡಿ ಅವರು ಸಂಪಾದಿತ ಕೃತಿ-ಸಿದ್ಧಪ್ರಭು ತತ್ವಪದಗಳು ಸಿದ್ಧಪ್ರಭುಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನವರು. ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ. ತನು-ಮನ-ಧನ ಮಹಾಬೇಲಿಯ ತೊಟ್ಟು, ತಂದಿತಾಯಿ ಒಂದು ಬಳ್ಳೊಳ್ಳಿ ಕೊಟ್ಟರೆ, ಜಾಣ ಗುಣದವನೆ ಭಕ್ತ, ಕೇಳಬಾರದು ಕಿವಿ ಕೇಳಬಾರದು, ಏನ ಬೇಕೋ ಯೋಗಿಗಿ ಏನ ಬ್ಯಾಡೋ, ಜಲ್ಮಕ ಬಾರದ ಕಾರ್ಯ ಮಾಡು, ಬರ್‍ರಿ ಮಿತ್ರ ಹೋಗನು ಬಸವ ಕಲ್ಯಾಣ, ದಾಸಿಯಾಗದು ಸಮ್ಮನಿಲ್ಲ,ಸಂತ ಯಾತಕ ಪಂಡಿತ ನಾನೆಂಬೊ, ಆತ್ಮದ ಅನುಭಾವ ಅರ್ಥವ ಹೇಳಲಿಕ್ಕೆ, ಕುಸ್ತಿ ಆಡುವನೆ ಜಾಮರ್ಧ, ಸರ್ವರಿಗಿ ಏನಂತಿ ನೀತಿ ನಡಿರಿ ಸ್ವಧರ್ಮ, ಮಿತ್ರ ನೋಡೋ ಇದು ಯಾತರ ಗಿಡವು, ನಿಧಿಯೊಳು ಭದ್ರನಾಥ ತಿಳಕೊ ಹೀಗೆ ಸಿದ್ಧಪ್ರಭುಗಳ ತತ್ವಪದಗಳನ್ನು ಸಂಪಾದಿಸಲಾಗಿದೆ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮುಖ್ಯಸ್ಥ ಹಾಗೂ ಸಾಹಿತಿ ಎಸ್. ನಟರಾಜ ಬೂದಾಳು ಕೃತಿಯ ಪ್ರಮುಖ ಸಂಪಾದಕರು.
©2025 Book Brahma Private Limited.