ರಂಗ, ಮಹಲಿಂಗರಂಗ, ಗುರುರಂಗ ಎಂಬ ಅಂಕಿತನಾಮದಿಂದ ಬರೆಯುವ ಶಂಕರಾನಂದರ ತತ್ವಪದಗಳನ್ನು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಾಡುತ್ತಾರೆ. ತುಮಕೂರು, ಚಿತ್ರದುರ್ಗ, ಮಂಡ್ಯ, ದಾವಣಗೆರೆ, ಹಾಸನ, ಮೈಸೂರು ಜಿಲ್ಲೆಗಳ ಎಲ್ಲ ಭಾಗಗಳಲ್ಲಿ ಅವರನ್ನು ಗುರುಸ್ವರೂಪಿಯಾಗು ಕಾಣುತ್ತಾರೆ. ಮಹಲಿಂಗರಂಗನ ಕರಸಂಜಾತನೆಂದು ಕರೆದುಕೊಳ್ಳುವ ಶಂಕರಾನಂದ ಯೋಗಿಗಳು ಕೈವಲ್ಯ ನವನೀತ, ಉತ್ತರ ಕೈವಲ್ಯ ನವನೀತ, ರಾಮಭಕ್ತಿಸಾರ ಎಂಬ ಕೃತಿಗಳನ್ನು ರಚಿಸಿದ್ದಾರೆ. 1833-1913ರ ನಡುವಿನ ಕಾಲಾವಧಿಯಲ್ಲಿ ಜೀವಿಸಿದ್ದ ಶಂಕರಾನಂದರು ತನ್ನನ್ನು ವಶಿಷ್ಠ, ಪರಾಶರ, ವ್ಯಾಸ, ಶುಕ, ಗೌಡಪಾದ, ಗೋವಿಂದ ಭಗವತ್ಪಾದರ ಪರಂಪರೆಯವರೆಂದು ಗುರುತಿಸಿಕೊಳ್ಳುತ್ತಾರೆ. ಅದ್ವೈತ ಪರಂಪರೆಯ ಕವಿ ಎಂಬುದು ತತ್ವಪದಗಳಿಂದ ಗೊತ್ತಾಗುತ್ತದೆ.
ಶಂಕರಾರ್ಯರೆಂದೇ ಸಾಧಕ ವಲಯದಲ್ಲಿ ಗುರುತಿಸಲಾಗುವ ವೇದಾಂತ ಶಿವರಾಮ ಶಾಸ್ತ್ರಿಗಳು ರಚಿಸಿದ ಶಂಕರತತ್ವ ಮತ್ತು ಶಂಕರಾನಂದ ಪದ್ಧತಿ ಎಂಬ ಕೃತಿಗಳಲ್ಲಿನ ಬಹುತೇಕ ತತ್ವಪದಗಳನ್ನು ಬಯಲುಸೀಮೆಯ ತತ್ವಪದಕಾರರು ಹಾಡುತ್ತಾರೆ. ಈ ತತ್ವಪದಗಳ ಹತ್ತಾರು ಹಸ್ತಪ್ರತಿಗಳು ಲಭ್ಯವಾಗಿವೆ. ಶಂಕರ, ಗುರುಶಂಕರ, ಶಂಕರಾರ್ಯ ಎಂಬ ಅಂಕಿತನಾಮದಿಂದ ಪದಗಳನ್ನು ರಚಿಸಿದ್ದಾರೆ.
ಈ ಉಭಯ ಕವಿಗಳ ತತ್ವಪದಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ.
©2024 Book Brahma Private Limited.